ಚಿಕ್ಕಮಗಳೂರು-ದಲಿತರ ಬದುಕಿನ ಕಷ್ಡ ಕಾರ್ಪಣ್ಯಗಳನ್ನು ದಿಟ್ಟ ಹೋರಾಟದಿಂದ ತೊಡೆದು ಹಾಕಿ ದಲಿತರ ಬಾಳಿಗೆ ಬೆಳಗುವ ಸೂರ್ಯವಾದವರು ಡಾ| ಬಿ.ಆರ್.ಅಂಬೇಡ್ಕರ್ ಎಂದು ದಸಂಸ ರಾಜ್ಯ ಮಹಿಳಾ ಅಧ್ಯಕ್ಷೆ ಎಲ್.ಸಿ.ವಸಂತಕುಮಾರಿ ಹೇಳಿದರು.
ನಗರದಲ್ಲಿ ದಲಿತ ಸಂಘರ್ಷ ಸಮಿತಿ (ಚಂದ್ರಕಾoತ್ ಎಸ್.ಕಾದ್ರೋಳ್ಳಿ ಬಣ)ದ ನೂತನ ಜಿಲ್ಲಾಧ್ಯಕ್ಷರಾಗಿ ಸುಂದರೇಶ್ ಹೊಯ್ಸಳಲು ಹಾಗೂ ವಿವಿಧ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಸಂಸ ನೂತನ ಜಿಲ್ಲಾಧ್ಯಕ್ಷ ಸುಂದರೇಶ್ ಹೊಯ್ಸಳಲು ಮಾತನಾಡಿ, ಶೋಷಿತ ವರ್ಗದ ಮೇಲೆ ಜರುಗಿದ ಅನ್ಯಾಯ, ಅಸ್ಪೃಶ್ಯತೆ ಹಾಗೂ ದೌರ್ಜನ್ಯ ಪ್ರಕರಣಗಳಿಗೆ ಕಡಿಹಾಣ ಹಾಕುವ ನಿಟ್ಟಿನಲ್ಲಿ ಚಂದ್ರಕಾoತ ಸು.ಕಾದ್ರೋಳ್ಳಿ ನಾಯಕತ್ವದಲ್ಲಿ ಸಮಿತಿ ಸ್ಥಾಪಿಸಲಾಗಿದ್ದು ಮುಂದೆ ಅಸಮಾನತೆ ವಿರುದ್ಧ ಹೋರಾಟದ ಹಾದಿಯಲ್ಲಿ ಮುಂದುವರೆದು ನ್ಯಾಯ ಒದಗಿಸಲು ಶ್ರಮಿಸುತ್ತೇನೆ ಎಂದರು.
ನೂತನ ಪದಾಧಿಕಾರಿಗಳ ಆಯ್ಕೆ
ಜಿಲ್ಲಾಧ್ಯಕ್ಷ ಸುಂದರೇಶ್ ಹೊಯ್ಸಳಲು, ಗೌರವಾಧ್ಯಕ್ಷ ಪೂವಪ್ಪ,ಕಾರ್ಯದ್ಯಕ್ಷ ರಾಜು, ಉಪಾಧ್ಯಕ್ಷರಾಗಿ ಎನ್.ಆರ್.ಪುರ ರವಿ, ಅಶ್ವತ್ ಕೊಪ್ಪ, ಕಾರ್ಯದರ್ಶಿಗಳಾಗಿ ಪುರಂದರಪ್ಪ, ರಘುವೀರ್, ಉಸ್ತುವಾರಿ ಅಧ್ಯಕ್ಷ ವಸಂತ್ ಕುಮಾರ್, ನ.ರಾ.ಪುರ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಪ್ರಸನ್ನ ಗುಂಡಪ್ಪ, ಮೂಡಿಗೆರೆ ಅಧ್ಯಕ್ಷ ಪೂರ್ಣೇಶ್, ಕಡೂರು ಅಧ್ಯಕ್ಷ ರಾಜು, ಕೊಪ್ಪಕ್ಕೆ ಸತೀಶ್, ನರಾಪುರ ಅಧ್ಯಕ್ಷ ಅಭಿಷೇಕ್, ತರೀಕೆರೆ ಅಧ್ಯಕ್ಷ ಸುನೀಲ್, ಶೃಂಗೇರಿ ಅಧ್ಯಕ್ಷ ಚೇತನ್, ಕೊಪ್ಪ ಮಹಿಳಾ ಅಧ್ಯಕ್ಷೆ ಗುಲಾಬಿ, ನರಾಪುರ ಅಧ್ಯಕ್ಷ ಶಾಂತರೇವಣ್ಣ, ಕಡೂರು ಮಹಿಳಾ ಅಧ್ಯಕ್ಷೆ ಮೀನಾಕ್ಷಿ, ಶೃಂಗೇರಿ ಅಧ್ಯಕ್ಷ ಅಶೋಕ್ ಅವರನ್ನು ರಾಜ್ಯ ಮಹಿಳಾ ಅಧ್ಯಕ್ಷರ ಸಮ್ಮುಖದಲ್ಲಿ ನೇಮಕ ಮಾಡಲಾಯಿತು.
ಈ ಸಭೆಯಲ್ಲಿ ದಸಂಸ ರಾಜ್ಯ ಕಾರ್ಯಾಧ್ಯಕ್ಷ ರಾಜಶಂಕರ್, ವಿಭಾಗಿಯ ಅಧ್ಯಕ್ಷ ಗಿರೀಶ್ ಇದ್ದರು.
————————–ಸುರೇಶ್