ಚಿಕ್ಕಮಗಳೂರು-ಜ್ಯೋತಿನಗರದ ‘ಜ್ಯೋತಿರ್ ಲಕ್ಷ್ಮಿ ಗಣಪತಿ’ಗೆ ‘150 ಕೇಜಿ ಬೆಲ್ಲ’ದಿಂದ ವಿಶೇಷ ಅಲಂಕಾರ-ರೇಖಾ ಹುಲಿಯಪ್ಪಗೌಡರ ನೇತೃತ್ವದಲ್ಲಿ ‘ಸಂಕ್ರಾಂತಿ ಸಂಭ್ರಮ’

ಚಿಕ್ಕಮಗಳೂರು-ಮಕರ ಸಂಕ್ರಾoತಿ ಹಬ್ಬದ ಪ್ರಯುಕ್ತ ನಗರದ ಜ್ಯೋತಿನಗರದ ಜ್ಯೋತಿರ್ ಲಕ್ಷ್ಮಿ ಗಣಪತಿ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಜ್ಯೋತಿರ್ ಲಕ್ಷ್ಮಿ ಗಣಪತಿಗೆ 150 ಕೆ.ಜಿ ಬೆಲ್ಲದಿಂದ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.ಮಂಗಳವಾರ ಸಂಜೆ ದೇವಸ್ಥಾನದಲ್ಲಿ ನೆರೆಹೊರೆಯ ಸುಮಾರು 200ಕ್ಕೂ ಹೆಚ್ಚು ಮಹಿಳೆಯರೂ ಸೇರಿ ಸ್ನೇಹ ಮಿಲನ ಎಂಬ ಕಾರ್ಯಕ್ರಮ ಮಾಡಿದ ನಂತರ ಭಕ್ತರು ಸಾಮೂಹಿಕ ಭಜನೆ ನಡೆಸಿಕೊಟ್ಟರು.

ಜ್ಯೋತಿರ್ ಲಕ್ಷ್ಮಿ ಗಣಪತಿ ಟ್ರಸ್ಟ್ ನ ಅಧ್ಯಕ್ಷರೂ ಹಾಗು ಜಿಲ್ಲಾ ಪಂಚಾಯಿತಿ ಮಾಜಿ ಆದ್ಯಕ್ಷರಾದ ರೇಖಾ ಹುಲಿಯಪ್ಪ ಗೌಡ ರವರು ಮಾತನಾಡಿ, ಗಣಪತಿಗೆ ಕಬ್ಬು ಎಂದರೆ ಪ್ರಿಯ. ಆದದ್ದರಿಂದ ಎಲ್ಲಾ ಭಕ್ತರ ನೆರವಿನಿಂದ ಕಬ್ಬಿನಿಂದ ಮಾಡಿದ 150 ಕೆ.ಜಿ ಬೆಲ್ಲದಲ್ಲಿ ವಿಶೇಷ ಅಲಂಕಾರ ಮಾಡಿಸಲಾಯಿತು ಎಂದರು.

ಸಂಕ್ರಾoತಿ ಅತ್ಯಂತ ವಿಶೇಷವಾದ ದಿನ. ಹಿಂದೂಗಳು ಮೂರು ಕೋಟಿ ದೇವರುಗಳನ್ನು ಪೂಜೆ ಮಾಡುತ್ತಾರೆ.ಕಣ್ಣಿಗೆ ಕಾಣುವ ದೇವರು ತಂದೆ ತಾಯಿ ಹೊರತುಪಡಿಸಿದರೆ, ಸೂರ್ಯ, ಚಂದ್ರ ಮತ್ತು ಭೂಮಿ ಮಾತ್ರ. ಜೀವರಾಶಿಗಳಿಗಾಗಿ ಸೂರ್ಯ ಜಗತ್ತನ್ನು ಬೆಳಗುತ್ತಾನೆ. ಜೀವರಾಶಿಗಳಿಗೆ ಜೀವ ಉಳಿಸಿಕೊಳ್ಳಲು ಸೂರ್ಯ ಅನಿವಾರ್ಯ. ಸೂರ್ಯ ತನ್ನ ಭ್ರಮಣಪಥವನ್ನು ಉತ್ತರಾಯಣಕ್ಕೆ ಬದಲಾಯಿಸಿರುವ ದಿನ ಯುಗಾದಿ.

ಹಿರಿಯರು ನಮಗೆ ಅನೇಕ ಆರೋಗ್ಯ ಪೂರ್ಣ ಬದುಕಿಗೆ ಹಬ್ಬಗಳ ಮೂಲಕ ಹಲವು ಸಂದೇಶಗಳನ್ನು ತಲಾ ತಲಾಂತರದಿoದ ನೀಡುತ್ತಾ ಬಂದಿದ್ದಾರೆ.ಚಳಿಗಾಲದಲ್ಲಿ ಹೇಹಕ್ಕೆ ಎಣ್ಣೆಯ ಅಂಶ ಅನಿವಾರ್ಯ,ಹೀಗೆ ಎಳ್ಳು,ಬೆಲ್ಲ ಸೇವಿಸುವ ಮೂಲಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ಆಗುತ್ತದೆ.ಹಿರಿಯರು ಕಿರಿಯರಿಗೆ ಬಳುವಳಿಯಾಗಿ ಸಂಪ್ರದಾಯಿಕ ಬದುಕು ಮತ್ತು ಉತ್ತಮ ಸಂಸ್ಕಾರದ ಹಾದಿಯಲ್ಲಿ ಪಯಣಿಸಲು ಸಂಕ್ರಾoತಿ ಹಬ್ಬದ ಸಾಮೂಹಿಕ ಆಚರಣೆ ಮೂಲಕ ಸಾಧ್ಯವಾಗುತ್ತದೆ ಎಂದು ತೋರಿಸಿಕೊಟ್ಟಿದ್ದಾರೆಂದರು.

ಸಾಂಪ್ರದಾಯಿಕ ಉಡುಗೆಗಳೊಂದಿಗೆ ಮಹಿಳೆಯರು ಸಾಮೂಹಿಕವಾಗಿ ಎಳ್ಳು, ಬೆಲ್ಲ, ಕಬ್ಬು ಹಂಚುವ ಮೂಲಕ ಸಂಭ್ರಮಿಸಿದರು.

ಗಣಪತಿಗೆ ವಿಶೇಷ ಬೆಲ್ಲದ ಅಲಂಕಾರ ಮಾಡಿದ ಅರ್ಚಕರಾದ ನಾಗೇಶ್ ಭಟ್ ರವರನ್ನು ಅಭಿನಂದಿಸಲಾಯಿತು.

Leave a Reply

Your email address will not be published. Required fields are marked *

× How can I help you?