ಚಿಕ್ಕಮಗಳೂರು-ರಾಜ್ಯ ಮಟ್ಟದ ದಂತ ವೈದ್ಯರ ಗಾಲ್ಫ್ ಕ್ರೀಡಾಕೂಟ-ಒತ್ತಡ ನಿವಾರಣೆಗೆ ಕ್ರೀಡಾಕೂಟ ಸಹಕಾರಿ- ಡಾ. ಭರತ್ ಅಭಿಪ್ರಾಯ

ಚಿಕ್ಕಮಗಳೂರು-ದಂತ ವೈದ್ಯರ ಒತ್ತಡದ ಕೆಲಸಗಳ ನಡುವೆ ಅವರಿಗೆ ಮನೋರಂಜನೆ ನೀಡುವ ಉದ್ದೇಶದಿಂದ ಮತ್ತು ಎಲ್ಲರೂ ಒಟ್ಟಾಗುವ ಮೂಲಕ ಪರಸ್ಪರ ಚರ್ಚಿಸಿ ಹೆಚ್ಚಿನ ಕಲಿಕೆಯನ್ನು ಪಡೆಯಲು ಕ್ರೀಡಾಕೂಟ ಸಹಕಾರಿಯಾಗಲಿವೆ ಎಂದು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಡಾ. ಭರತ್ ಅವರು ಅಭಿಪ್ರಾಯಿಸಿದರು.

ನಗರದ ಹೊರವಲಯದಲ್ಲಿರುವ ಗಾಲ್ಫ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಎರಡನೇ ರಾಜ್ಯಮಟ್ಟದ ಗಾಲ್ಫ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿ,ದಂತ ವೈದ್ಯರುಗಳ ಒತ್ತಡದ ಕೆಲಸಗಳ ಮಧ್ಯೆ ಅವರನ್ನು ಒಟ್ಟುಗೂಡಿಸಿ ಮನೋರಂಜನೆಯನ್ನು ನೀಡುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದ್ದು ಈ ಕ್ರೀಡಾಕೂಟದಿಂದ ದಂತವೈದ್ಯರು ಪರಸ್ಪರ ಭೇಟಿಯಾಗುವ ಮೂಲಕ ತಮ್ಮ ವೈದ್ಯಕೀಯ ಕಲಿಕೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡು ಉತ್ತಮ ರೀತಿಯ ಸೇವೆಯನ್ನು ನೀಡಲು ಸಹಕಾರಿಯಾಗಲಿದೆ ಎಂದರು.

ರಾಜ್ಯಾದ್ಯಂತ ಈ ಕ್ರೀಡಾಕೂಟಕ್ಕೆ ಆಗಮಿಸಿರುವ ದಂತ ವೈದ್ಯರುಗಳು ಚಿಕ್ಕಮಗಳೂರಿನ ವಾತಾವರಣವನ್ನು ಆನಂದಿಸುವುದರ ಜೊತೆಗೆ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ಇತರ ಚಟುವಟಿಕೆಗಳನ್ನು ನಡೆಸುವ ಮೂಲಕ ದಂತ ವೈದ್ಯರ ಅಭಿವೃದ್ಧಿಗೆ ನಮ್ಮ ಅಸೋಸಿಯೇಷನ್ ಪ್ರಯತ್ನಿಸುತ್ತದೆ ಎಂದು ತಿಳಿಸಿದರು.

ಇoಡಿಯನ್ ಡೆಂಟಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾದ ಡಾ. ವಿಮಲ್ ಜೈನ್ ಮಾತನಾಡಿ, ಪ್ರತಿವರ್ಷದಂತೆ ರಾಜ್ಯಮಟ್ಟದಲ್ಲಿ ನಡೆಯುವ ಈ ಕ್ರೀಡಾಕೂಟವು ಈ ಬಾರಿ ಇದರ ಆಥಿತ್ಯ ಚಿಕ್ಕಮಗಳೂರಿಗೆ ಲಭಿಸಿರುವುದು ಸಂತೋಷವಾಗಿದ್ದು ಈ ನಿಟ್ಟಿನಲ್ಲಿ ಕ್ರೀಡಾಕೂಟಕ್ಕೆ ಆಗಮಿಸಿರುವ ದಂತ ವೈದ್ಯರುಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಚ್ಚುಕಟ್ಟಾಗಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.ಈ ಕ್ರೀಡಾಕೂಟದಲ್ಲಿ 30 ಜನ ಸ್ಪರ್ಧಿಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಸ್ಪರ್ಧಿಸುತ್ತಿದ್ದು ಈ ಮೂಲಕ ದಂತ ವೈದ್ಯರ ಒಗ್ಗಟ್ಟು ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಿದರು.

ವಿವಿಧ ಸುತ್ತುಗಳಲ್ಲಿ ಹಾಗೂ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು, ನಂತರ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಪರ್ಧೆಯ ಆಯೋಜಕ ವ್ಯವಸ್ಥಾಪಕರಾದ ಡಾ. ಶಿವಪ್ರಕಾಶ್, ಕಾರ್ಯದರ್ಶಿ ಡಾಕ್ಟರ್ ನಿಶಾಂತ್ ನಿಯತ್, ಚಿಕ್ಕಮಗಳೂರು ಗಾಲ್ಫ್ ಕ್ಲಬ್ ನ ಅಧ್ಯಕ್ಷರಾದ ಎಂ ಆರ್ ಸುದರ್ಶನ್ ಮತ್ತು ಸದಸ್ಯರುಗಳಾದ ಡಾ. ಶುಭ ಉಜ್ವಲ್, ಡಾ.ಶಾಂಭವಿ ಡಾ. ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *

× How can I help you?