ಚಿಕ್ಕಮಗಳೂರು-ನಗರದ ರಾಮನಹಳ್ಳಿಯ ಹೂವಾಡಿಗರ ಬೀದಿಯಲ್ಲಿ ಶ್ರೀ ಹನುಮಂತ ದೇವಾಲಯದ 3ನೇ ವರ್ಷದ ವಾರ್ಷಿಕೋತ್ಸವ ಹಾಗೂ ಹನುಮ ಜಯಂತಿ ಮಹೋತ್ಸವ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಪೂಜಾ ವಿಧಿವಿಧಾ ನಗಳ ಮುಖಾಂತರ ಶ್ರದ್ದಾಭಕ್ತಿಯಿಂದ ಶುಕ್ರವಾರ ಸಂಪನ್ನ ಗೊಂಡತು.
ಹನುಮ ಜಯಂತಿ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ದೇವಾಲಯಕ್ಕೆ ಭೇಟಿ ನೀಡಿ ಹನುಮನಿಗೆ ಜೈಕಾರ ಕೂಗಿ ದೇವಾಲಯ ಪ್ರವೇಶಿಸಿ ದರ್ಶನ ಪಡೆದುಕೊಂಡು ಮಾತನಾಡಿ,ಶ್ರೀರಾಮ ಹಾಗೂ ಹನುಮನ ನಡುವಿನ ಪ್ರೀತಿ,ಬಾಂಧವ್ಯವನ್ನು ನಮ್ಮಗಳ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನೆಡೆದರೆ ಸಾತ್ವಿಕ ಜೀವನ ಸಾಧ್ಯ ಎಂದರು.
ಕಳೆದೆರಡು ದಿನಗಳಿಂದ ಆಯೋಜಿಸಿದ್ಧ ದೇವಾಲಯ ಪೂಜಾ ಮಹೋತ್ಸವ ಇಂದು ಬೆಳಿಗ್ಗೆ ಶ್ರೀ ರಾಮೇಶ್ವರ ದೇವಾಲಯದಿಂದ ಗಂಗಾಪೂಜೆ ನಂತರ ದೇಗುಲದ ಪ್ರವೇಶದೊಂದಿಗೆ ಮಹಾಸಂಕಲ್ಪ, ಪ್ರತಿಷ್ಟಾ ಕಳಶ ಪೂಜೆ, ಪಂಚಾಮೃತ ಅಭಿಷೇಕ, ಕಲಾಹೋಮ, ಜಯಾದಿ ಹೋಮ, ಪ್ರಾಯಶ್ಚಿತ ಹೋಮ, ಪೂರ್ಣಾಹುತಿಯೊಂದಿಗೆ ಮಹಾಮಂಗಳಾರತಿ ನಡೆಯಿತು.
ಮುಂಜಾನೆಯಿoದಲೇ ಹನುಮ ಜಯಂತಿ ಪ್ರಯುಕ್ತ ಅಕ್ಕಪಕ್ಕದ ನಿವಾಸಿಗಳು ಸಕುಟುಂಬ ಸಮೇತ ದೇವಾಯಲಕ್ಕೆ ಆಗಮಿಸಿ ವಿಶೇಷ ಅಲಂಕಾರದಿoದ ಕಂಗೊಳಿಸಿದ್ಧ ಶ್ರೀ ಹನುಮ ಮೂರ್ತಿಯ ದರ್ಶನ ಪಡೆದುಕೊಂಡರು. ಯುವಕ-ಯುವತಿಯರು, ಮಕ್ಕಳು ಹಾಗೂ ವೃದ್ದರು ಸಾಂಪ್ರದಾಯಿಕ ವಸ್ತ್ರಗಳನ್ನು ತೊಟ್ಟು ಪೂಜೆಯಲ್ಲಿ ಭಾಗವಹಿಸಿದ್ದರು.
ತದನಂತರ ಮಧ್ಯಾಹ್ನ 12 ಗಂಟೆಗೆ ದೇವಾಲಯ ಸಮಿತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಸರದಿಸಾಲಿನಲ್ಲಿ ನಿಂತ ಭಕ್ತಾಧಿಗಳು ಅನ್ನಪ್ರಸಾದವನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಿದರು.
ಕೆಲ ಬಾಲಕ-ಬಾಲಕಿಯರು ದೇವಾಲಯದ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡು ಹನುಮ ಜಯಂತಿಯನ್ನು ಅತ್ಯಂತ ಸಂಭ್ರಮದಿoದ ಆಚರಿಸಿದರು.
ದೇವಾಲಯ ಸೇವಾ ಸಮಿತಿ ಪದಾಧಿಕಾರಿಗಳು ಎರಡು ದಿನಗಳ ಪೂಜಾವಿಧಿವಿಧಾನ ತಯಾರಿಯಲ್ಲಿ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಂಡು ಮಹೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಸಂಪನ್ನಗೊಳಿಸಿದರು. ಸಂಜೆ ವಿಶೇಷ ಅಲಂಕಾರ ಮಂಟಪದಲ್ಲಿ ಶ್ರೀಯವರನ್ನು ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಹನುಮಂತ ದೇವಾಲಯ ಸಮಿತಿ ಪದಾಧಿಕಾರಿಗಳು ಹಾಗೂ ರಾಮನಹಳ್ಳಿ ಹೂವಾಡಿಗರ ಬೀದಿಯ ಗ್ರಾಮಸ್ಥರು ಪಾಲ್ಗೊಂಡಿದ್ದರು.