ಚಿಕ್ಕಮಗಳೂರು-ರೈತರಿಗೆ ನೆರವಾಗುವ ದೃಷ್ಟಿಯಿಂದ ನೇರವಾಗಿ ರೈತರಿಂದಲೇ ತರಕಾರಿ, ಹಣ್ಣುಗಳನ್ನು ಖರೀದಿಸಿ ಹಾಪ್ ಕಾಮ್ಸ್ಗಳ ಮಳಿಗೆಗಳನ್ನು ತೆರೆದು ಮಾರಾಟಕ್ಕೆ ಮುಂದಾಗಲಾಗುವುದು ಎಂದು ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಕೆ.ಹೆಚ್.ಕುಮಾರಸ್ವಾಮಿ ಹೇಳಿದರು.
ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಜಿಲ್ಲಾ ತೋಟಗಾರಿಕೆ ಉತ್ಪನ್ನಗಳ ಮಾರಾ ಟ ಮತ್ತು ಸಂಸ್ಕರಣ ಸಹಕಾರ ಸಂಘದ 10ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಬುಧವಾರ ಅವರು ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಹಾಪ್ ಕಾಮ್ಸ್ಗೆ ಸರ್ಕಾರದ ಯಾವುದೇ ಅನುದಾನವಿರಲಿಲ್ಲ.ಇದೀಗ ನೂತನ ಎಂ.ಡಿ. ಅಧಿಕಾರ ವಹಿಸಿಕೊಂಡ ಬಳಿಕ 2 ಲಕ್ಷ ರೂ. ಮಂಜೂರಾಗಿ ಕಚೇರಿಗೆ ಪರಿಕರಗಳನ್ನು ಖರೀದಿಸಲಾಗಿದೆ.ಜಿಲ್ಲೆಯಲ್ಲಿ ಎರಡು ಹಣ್ಣಿನ ರಸ ತೆಗೆಯುವ ಘಟಕಕ್ಕೆ 75 ಲಕ್ಷ ಮಂಜೂರುಗೊಳಿಸುವ ಭರವಸೆ ನೀಡಿದ್ದಾರೆ ಎಂದರು.
ತರೀಕೆರೆ ಹಾಗೂ ಕಡೂರು ಭಾಗದಲ್ಲಿ ಬಾಳೆ, ಮಾವಿನಹಣ್ಣನ್ನು ರೈತರಿಂದ ಖರೀದಿಸಿ ರಾಸಯನಿಕ ಪದಾರ್ಥ ಬಳಸದಂತೆ ಸಾಂಪ್ರದಾಯಿಕ ಪದ್ಧತಿಯಂತೆ ಹಣ್ಣು ಮಾಡಿಸಿ ಕೊಡುವ ಕಾರ್ಯಕ್ರಮವಿದೆ. ಮುoದಿನ ಅಕ್ಟೋಬರ್ ತಿಂಗಳಿoದ ಪ್ರತಿ ತಾಲ್ಲೂಕುನಾದ್ಯಂತ ಬೆಳೆಗೆ ಅನುಸಾರ ಸಮಗ್ರ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ನಬಾರ್ಡ್ ವತಿಯಿಂದ 45 ಲಕ್ಷ ರೂ. ವೆಚ್ಚದಲ್ಲಿ ಹಣ್ಣನ್ನು ನಿಜಲೀಕರಣ ಘಟಕ ತೆರೆಯುವ ಉದ್ದೇಶವಿದೆ. ಹೀಗಾಗಿ ರೈತಾಪಿ ವರ್ಗ ಸಹಕಾರ ಸಂಘದಲ್ಲಿ ಷೇರು ಹೊಂದಿ ಕನಿಷ್ಟ 300 ಮಂದಿ ಸಂಘಟಿತರಾದರೆ ಸೂಕ್ತ ಸ್ಥಳದಲ್ಲಿ ನಬಾರ್ಡ್ನ ಸಂಪೂರ್ಣ ಸಹಾಯಧನದಲ್ಲಿ ಘಟಕ ಹಾಗೂ ಕಟ್ಟಡ ನಿರ್ಮಿಸುವ ಯೋಜನೆ ಮಾಡಲಾಗುವುದು ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಸಹಕಾರ ಸಂಘಕ್ಕೆ 500 ಮಂದಿ ಷೇರುದಾರರನ್ನು ಹೆಚ್ಚಳಗೊಳಿಸಿ ಕೆಲಸ ನಿರ್ವಹಿಸಲು ಅಣಿಗೊಳಿಸಲಾಗಿದೆ. ಕ್ಷೇತ್ರದ ಶಾಸಕರ ಸಹಕಾರದಿಂದ ನಗರಸಭಾದ ಅನೇಕ ಕಟ್ಟಡಗಳಲ್ಲಿ ಮಳಿಗೆ ತೆರೆದು ನಗರ ಪ್ರದೇಶದ ಗ್ರಾಹಕರಿಗೆ ಗುಣಮಟ್ಟದ ಹಣ್ಣು, ತರಕಾರಿಗಳನ್ನು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಶೀಘ್ರದಲ್ಲೇ ಮುಂದಾಗುತ್ತೇವೆ ಎಂದರು.
ಸoಘದ ಉಪಾಧ್ಯಕ್ಷ ಎನ್.ಪಿ.ರವಿ ಮಾತನಾಡಿ ಸಂಘದಲ್ಲೇ ಈಗಾಗಲೇ 940 ಮಂದಿ ಜಿಲ್ಲಾದ್ಯಂತ ಸದಸ್ಯತ್ವ ಹೊಂದಿದ್ದು ಶೈಕ್ಷಣಿಕ ಸಾಲಿನಲ್ಲಿ 1 ಲಕ್ಷ ರೂ.ಗಳಷ್ಟು ನಿವ್ವಳ ಲಾಭಗಳಿಸಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಎ.ಎನ್.ಮಹೇಶ್, ಬಿ.ಸಿ.ನರೇಂದ್ರ,ಡಿ.ಬಿ.ನರೇಂದ್ರ,ಡಿ.ಬಿ.ಜಯಪ್ರಕಾಶ್, ಬಿ.ನಾಗಭೂಷಣ್, ಜಿ.ಯು.ರಾಮಚಂದ್ರಪ್ಪ,ಎಸ್.ಬಿ.ರಾಮಚಂದ್ರಪ್ಪ,ಎಲ್.ಸಿ.ಆನಂ ದ್,ಮಲ್ಲೇಶಯ್ಯ, ಮೋಹನ್‌ಕುಮಾರಿ, ಜಯಮ್ಮ, ಶಶಿಕಲಾ ಮತ್ತಿತರರಿದ್ದರು.
————–ಸುರೇಶ್