ಚಿಕ್ಕಮಗಳೂರು;ಮಾನವೀಯಮೌಲ್ಯ-ಸಕಾರಾತ್ಮಕ ಮನೋಭಾವ ರೂಢಿಸಕೊಂಡರೆ ಭವಿಷ್ಯ ಹಸನಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತೆ ಪಲ್ಲವಿ ಸಿ.ಟಿ.ರವಿ ನುಡಿದರು.
ಐ.ಡಿ.ಎಸ್.ಜಿ ಸರ್ಕಾರಿ ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ವಿಭಾಗ ಮಲ್ಲೇಗೌಡ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ದ್ವಿತೀಯ ಎಂ.ಎ.ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನ ವರ್ಣಮಯ.ನೋವು-ನಲಿವು, ಕಷ್ಟ-ಸುಖ, ಏರಿಳಿತಗಳು ಸಹಜ.ಇದನ್ನು ನಿಭಾಯಿಸುವಲ್ಲಿ ನಮ್ಮ ಸಾಮರ್ಥ್ಯ ತೋರಬೇಕಿದೆ.ಮುಂದಾಲೋಚನೆ,ಶಿಸ್ತುಬದ್ಧತೆ,ಸಮಾಜದ ಬದ್ಧತೆಯನ್ನು ಶಿಕ್ಷಣದ ಹಂತದಲ್ಲಿ ಕಲಿತು ಭವಿಷ್ಯದ ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಸುಖಮಯವಾಗುತ್ತದೆ ಎಂದರು.
ವಿವೇಚನೆ ಮತ್ತು ವಿವೇಕ ಕಲಿಕೆಯ ಹಂತದಲ್ಲಿ ಮನೋಗತ ಮಾಡಿಕೊಳ್ಳಬೇಕು. ಸಮಾಜಮುಖಿ ಚಿಂತನೆ ನಮ್ಮದಾಗಬೇಕು. ಸ್ವಯಂಶಿಸ್ತು, ಸ್ವಚ್ಛತೆ, ಕಠಿಣಪರಿಶ್ರಮ, ಕರ್ತವ್ಯನಿಷ್ಠೆ, ಸಮಯಪಾಲನೆಗೆ ಆದ್ಯತೆ ನೀಡಲು ಕರೆ ನೀಡಿದ ಪಲ್ಲವಿ, ಉನ್ನತಶಿಕ್ಷಣ ಪಡೆದವರು ಸಮಾಜಕ್ಕೆ ಉಪಯುಕ್ತರಾಗಿ ನಾಯಕತ್ವ ನೀಡುವಂತಾಗಬೇಕೆoದರು.
ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಪ್ರೊ.ಕೆ.ಎನ್.ಲಕ್ಷ್ಮೀಕಾಂತ ಪ್ರಾಸ್ತಾವಿಕವಾಗಿ ಮಾತನಾಡಿ 2008ರಿಂದ ಅರ್ಥಶಾಸ್ತ್ರ ಸ್ನಾತಕೋತ್ತರವಿಭಾಗ ಪ್ರಾರಂಭಗೊoಡಾಗಿನಿoದ ಪ್ರಥಮ ವರ್ಷದವರೆಗೆ ಸ್ವಾಗತಕೋರಿ ಕೊನೆಯ ವರ್ಷದವರೆಗೆ ಬೀಳ್ಕೊಡುವ ಪರಿಪಾಠವನ್ನು ಹೊಂದಿದೆ.
ಹಿರಿಯರನ್ನು ಕರೆಯಿಸಿ ಹಿತನುಡಿ ಕೇಳಿಸಿ ಶುಭಕೋರುವ ಸಂದರ್ಭವಿದು.ಇಲ್ಲಿ ಅಧ್ಯಯನ ಮಾಡಿದ ನೂರಾರು ವಿದ್ಯಾರ್ಥಿಗಳು ಉತ್ತಮವಾಗಿ ಬದುಕು ಕಟ್ಟಿಕೊಂಡಿದ್ದಾರೆ. ಐಎಎಸ್, ಕೆಎಎಸ್, ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಆಡಳಿತದ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.ಕಾಲೇಜಿನಲ್ಲಿ ಒಟ್ಟು ಎಂಟು ಸ್ನಾತಕೋತ್ತರ ವಿಭಾಗಗಳಿದ್ದು ವಿಶೇಷವಾಗಿ ಗ್ರಾಮೀಣ ಯುವಜನತೆ ಕಡಿಮೆ ವೆಚ್ಚದಲ್ಲಿ ಉನ್ನತಶಿಕ್ಷಣ ಪಡೆಯಲು ಸಹಕಾರಿಯಾಗಿದೆ ಎಂದರು.
ಕನ್ನಡ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ.ಪುಷ್ಪಭಾರತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲ್ಲಿ ಕಲಿತದ್ದನ್ನು ಸಮಾಜಕ್ಕೆ ದಾಟಿಸುವ ಜವಾಬ್ದಾರಿ ಹಿರಿಯ ವಿದ್ಯಾರ್ಥಿಗಳ ಮೇಲಿದೆ.ಗುರು ಮತ್ತು ಗುರಿ ನಡುವಿನ ಸಮನ್ವಯತೆ ಇಲ್ಲಿ ವಿದ್ಯಾರ್ಥಿಗಳು ಕಂಡುಕೊooಡಿದ್ದಾರೆ.ಇದು ವಿದಾಯವಲ್ಲ.ಜೀವನದ ಮೆಟ್ಟಿಲು ಎಂದ ಅವರು, ಜೀವನವೆಂಬ ಮಹಾಯುದ್ಧವನ್ನು ನಿಭಾಯಿಸುವ ಸಾಮರ್ಥ್ಯ ಇಲ್ಲಿ ವಿದ್ಯಾರ್ಥಿಗಳು ಪಡೆದಿದ್ದಾರೆಂದರು.
ಕಾಲೇಜು ಪ್ರಾಂಶುಪಾಲೆ ಡಾ.ಕೆ.ಕಲಾವತಿ ಮಾತನಾಡಿ ರಾಷ್ಟದ ಅಭಿವೃದ್ಧಿಯಲ್ಲಿ ಅರ್ಥ ಮತ್ತು ವಾಣಿಜ್ಯ ಪ್ರಮುಖವಾದವು. ಇವೆರಡರ ನಡುವೆ ಅವಿನಾಭಾವ ಸಂಬoಧವಿದೆ.ಅರ್ಥಶಾಸ್ತ್ರದ ನಿಯಮ ಸಿದ್ಧಾಂತಗಳನ್ನು ಮನೆ, ಸಮಾಜ, ದೇಶ ಎಲ್ಲ ಕಡೆಯೂ ಅನುಸರಿಸಿದರೆ ನಿರ್ವಹಣೆ ಸಮರ್ಪಕವಾಗುತ್ತದೆ ಎಂದು ಹೇಳಿದರು.
ಜೀವನ ಪರಿಪೂರ್ಣವಾಗಿ ರೂಪಿಸಿಕೊಳ್ಳಲು ಕಲೆ,ವಾಣಿಜ್ಯದೊಂದಿಗೆ ವಿಜ್ಞಾನವೂ ಮೇಳೈಸಬೇಕು.ವೈಜ್ಞಾನಿಕ ಮನೋಭಾವ ನಮ್ಮದಾಗಬೇಕು.ಭಾವನೆಗಳನ್ನು ಗೌರವಿಸುವುದು ಮುಖ್ಯ.ಕಲಿಕೆ ನಿರಂತರ ಪ್ರಕ್ರಿಯೆ.ಉನ್ನತವಾದ ಗುರಿಯೊಂದಿಗೆ ನಿರಂತರ ಪ್ರಯತ್ನ ಯಶಸ್ಸಿನಮೆಟ್ಟಿಲು ಎಂದ ಡಾ.ಕಲಾವತಿ,ವೃತ್ತಿ ಗೌರವವನ್ನು ಸದಾ ಕಾಪಾಡಬೇಕು ಎಂದರು.
ವಾಣಿಜ್ಯ ವಿಭಾಗದಮುಖ್ಯಸ್ಥ ಡಾ.ರಾಧಾಕೃಷ್ಣ ,ಅರ್ಥಶಾಸ್ತ್ರ ವಿಭಾಗದಮುಖ್ಯಸ್ಥ ಡಾ.ಎಸ್.ಮಹೇಶ್ ಮಾತನಾಡಿ ಸ್ಪ ರ್ಧಾತ್ಮಕವಾಗಿ ಯಶಸ್ವಿಯಾದವರು ಉತ್ತಮ ಉದ್ಯೋಗವನ್ನು ಸರ್ಕಾರಿ ಅಥವಾ ಸಾರ್ವಜನಿಕ ವಲಯದಲ್ಲಿ ಹೊಂದಬಹುದು. ಅವಿರತವಾದ ಪ್ರಯತ್ನವೇ ಯಶಸ್ಸಿನ ಮೂಲ ಎಂದರು.
ಉಪನ್ಯಾಸಕರುಗಳಾದ ಶಿವಕುಮಾರ, ಆರತಿ, ಆಶಾ, ರಾಜ್ಯಶಾಸ್ತç ಮುಖ್ಯಸ್ಥೆ ಡಾ.ಮಣಿಯಾರ್, ಸಮಾಜಶಾಸ್ತç ಮುಖ್ಯಸ್ಥ ಪ್ರೊ.ಸತೀಶ್, ರಸಾಯನಶಾಸ್ಟ್ರ ವಿಭಾಗದ ಡಾ.ಜಗದೀಶ್, ಇಂಗ್ಲೀಷ್ ವಿಭಾಗದ ಡಾ.ದೇವಾನಂದ, ಇತಿಹಾಸವಿಭಾಗದ ಡಾ.ಲೋಕೇಶ್, ಡಾ.ನವೀನ್, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರೀ ಮತ್ತಿತರರು ಶುಭಹಾರೈಸಿದರು.
ವಿದ್ಯಾರ್ಥಿಗಳಾದ ಯುವರಾಣಿ, ಸುಶ್ಮಿತಾ, ಸುಸ್ಥಿರ, ಯೋಗೀಶ್, ಪ್ರಶಾಂತ್, ಸಿದ್ಧಾರ್ಥ ಸವಿನೆನಪುಗಳನ್ನು ಹಂಚಿಕೊoಡರು. ಸಹನಾ ವಂದಿಸಿದರು.
—————–ಪಿ ಶಾಸ್ತ್ರಿ