ಚಿಕ್ಕಮಗಳೂರು-ಜೈ ಕನ್ನಡಾಂಬೆ ಬಳಗದಿಂದ 69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಗುರುವಾರ ಇಂದಾವರ ಸಮೀಪ ಅನ್ನಪೂರ್ಣ ವೃದ್ದಾಶ್ರಮಕ್ಕೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಕಲ್ಪಿಸಿಕೊಟ್ಟರು.
ಜೈಕನ್ನಡಾಂಬೆ ಬಳಗವು ಸ್ಥಾಪನೆಗೊಂಡು ಕಳೆದ ಹತ್ತು ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಸೇರಿದಂತೆ ಗಣೇಶೋತ್ಸವ ಹಾಗೂ ದತ್ತಜಯಂತಿ ವೇಳೆ ಎಂ.ಜಿ.ರಸ್ತೆ ಬಸವನಗುಡಿ ಸಮೀಪ ಪ್ರತಿ ವರ್ಷವು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆ ಸಲಾಗುತ್ತಿದೆ ಎಂದು ಪದಾಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೈ ಕನ್ನಡಾಂಬೆ ಬಳಗದ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು.