ಚಿಕ್ಕಮಗಳೂರಿನ ಹಿರಿಯ ಸಾಹಿತಿ ಗೊ.ರು ಚನ್ನಬಸಪ್ಪ-87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ

ಮಂಡ್ಯ-ಡಿ 20 ರಿಂದ 22 ರ ವರಗೆ ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ.ರು ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಿರುವುದು ಅಭಿನಂದನೀಯ ಎಂದು ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯ ಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಇಂದು ನಡೆದ ಕ.ಸಾ.ಪ ಕಾರ್ಯಕಾರಿ ಸಮಿತಿಯಲ್ಲಿ ಸಭೆಯಲ್ಲಿ ಗೊ.ರು ಚ ಅವರನ್ನು ಅಯ್ಕೆ ಮಾಡಿರುವುದು ಸಂತಸ ತಂದಿದೆ ಇದು ಅರ್ಹತೆಗೆ ಸಲ್ಲುತ್ತಿರುವ ಗೌರವ ಎಂದು ಅವರು ಹೇಳಿದ್ದಾರೆ.

ನಾಡು, ನುಡಿಗೆ ಗೊ.ರು.ಚ ಕೊಡುಗೆ ಅಪಾರ

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಗೊಂಡೇದಹಳ್ಳಿಯಲ್ಲಿ ಜನಿಸಿದ ಗೊ.ರು.ಚೆನ್ನಬಸಪ್ಪ ಅವರು ನಾಡು ನುಡಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ.ಸಾಹಿತ್ಯ ಪರಿಷತ್ತಿನ ಸಂಘಟನೆ ಬಲವರ್ಧನೆ ಗೆ ಗೊ.ರು ಚನ್ನಬಸಪ್ಪ ಅವರ ಪರಿಶ್ರಮ ಅಪಾರ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

ಗೊ.ರು.ಚ ಅವರು ಈ ಹಿಂದೆ ಕ.ಸಾ.ಪ ಅಧ್ಯಕ್ಷರಾಗಿ, ,ಕಾರ್ಯದರ್ಶಿಯಾಗಿ ಎಲ್ಲರೂ ಮುಚ್ಚುವಂತೆ ಕಾರ್ಯ ನಿರ್ವಹಿಸಿದ್ದಾರೆ ಎಂದು ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು.

ಗೊ.ರು.ಚ ಅವರು ತಮ್ಮ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಆರ್ಥಿಕವಾಗಿ ಸದೃಢರನ್ನಾಗಿಸುವಲ್ಲಿ ಶ್ರಮಿಸಿದ್ದರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಾನಪದ ತಜ್ಞರೂ ಆಗಿರುವ ಚನ್ನಬಸಪ್ಪ ಅವರು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಭಾರತದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ಗೊ.ರು.ಚ.ಅವರ ಪಾತ್ರ ದೊಡ್ಡದಿದೆ. ಅವರು ಕರ್ನಾಟಕ ಪ್ರಗತಿ ಪಥ, ಚೆಲುವಾಂಬಿಕೆ, ಕುನಾಲ, ಮಹಾದೇವಿ, ಸದಾಶಿವ ಶಿವಾಚಾರ್ಯ, ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರ್ಯಾವೊ, ಬಾಗೂರು, ನಾಗಮ್ಮ, ಗ್ರಾಮ ಗೀತೆಗಳು, ವಿಭೂತಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

1930 ರಲ್ಲಿ ಜನಿಸಿ ಕನ್ನಡ ನಾಡಿಗೆ, ನುಡಿಗೆ ಅಪರೂಪದ ಕೊಡುಗೆಯನ್ನು ನೀಡಿ, 94 ರ ವಯಸ್ಸಿನಲ್ಲೂ ಕನ್ನಡಕ್ಕಾಗಿ ಚಿಂತನೆಯಲ್ಲಿ ತೊಡಗಿರುವ ಅವರನ್ನು ಕನ್ನಡ ಸಾಹಿತ್ಯ ಸಮ್ಮೇಳನ ಆಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಇನ್ನಷ್ಟು ಗೌರವ ಹೆಚ್ಚಿಸಿದೆ ಎಂದು ಕೃಷಿ ಸಚಿವರು ತಮ್ಮ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

× How can I help you?