ಚಿಕ್ಕಮಗಳೂರು-ಕನ್ನಡಸೇನೆಯಿಂದ ಮಾಜಿ ಮುಖ್ಯಮಂತ್ರಿ ಎಸ.ಎಂ ಕೃಷ್ಣರಿಗೆ ನುಡಿನಮನ

ಚಿಕ್ಕಮಗಳೂರು-ರಾಜಕೀಯ ಮುತ್ಸದಿ ಹಾಗೂ ಅಭಿವೃದ್ದಿ ಹರಿಕಾರ ಎಂ.ಎಸ್. ಕೃಷ್ಣರವರು ನಿಧನರಾದ ಹಿನ್ನೆಲೆ ಮಂಗಳವಾರ ಸಂಜೆ ನಗರದ ರಾಮಮಂದಿರ ಸಮೀಪ ಜಿಲ್ಲಾ ಕನ್ನಡ ಸೇನೆ ಪದಾಧಿಕಾರಿಗಳು ಮೌನಾಚರಣೆ ನಡೆಸಿ ಶ್ರದ್ದಾಂಜಲಿ ಅರ್ಪಿಸಿದರು.

ಬಳಿಕ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ವ್ಯಕ್ತಿ ನಶಿಸಬಹುದು, ವ್ಯಕ್ತಿತ್ವ ನಶಿಸದಂತೆ ಸಮಾಜದಲ್ಲಿ ಬದುಕಿ ಬಾಳಿದವರು ಎಂ.ಎಸ್.ಕೃಷ್ಣರವರು.ಅವರು ಸರ್ಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ ಹಾಗೂ ಯಶಸ್ವಿನಿ ಯೋಜನೆ ಜಾರಿಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಟ್ಟವರು ಎಂದು ತಿಳಿಸಿದರು.

ಕನ್ನಡಿಗರ ಆರಾಧ್ಯದೈವ ಡಾ|| ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ ವೇಳೆಯಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ ಎಂ.ಎಸ್.ಕೃಷ್ಣ ಸುರಕ್ಷಿತವಾಗಿ ರಾಜ್‌ಕುಮಾರನ್ನು ಕರೆತಂದು ಅಭಿಮಾನಿಗಳಿಗೆ ಒಪ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಮoಡ್ಯ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ಎಂ.ಎಸ್.ಕೃಷ್ಣರವರು ರಾಜ್ಯದ ಮುಖ್ಯಮಂತ್ರಿ, ವಿದೇಶಾಂಗ ಸಚಿವ ಹಾಗೂ ಮಹಾರಾಷ್ಟ್ರ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿರುವುದು ಕನ್ನಡಿಗರಿಗೆ ಹೆಮ್ಮೆಯಿದೆ. ಅಲ್ಲದೇ ಚಿಕ್ಕಮಗಳೂರು ಅಭಿವೃಧ್ದಿ ವಿಚಾರದಲ್ಲಿ ಕೃಷ್ಣರವರು ಶ್ರಮಿಸಿರುವುದು ಸಂತಸದ ಸಂಗತಿ ಎಂದರು.

ನಗರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ನಾರಾಯಣ್ ಮಾತನಾಡಿ, ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ಜನಪರ ನಾಯಕ ಎಂ.ಎಸ್.ಕೃಷ್ಣರವರು. ರಾಜ್ಯದ ಅಭಿವೃಧ್ದಿ ಹಾದಿಯನ್ನೇ ಬದುಕಿನ ಹಾದಿಯೆಂದು ಪರಿಗಣಿಸಿ ದಿಟ್ಟತನದಿಂದ ಅಧಿಕಾರ ನಡೆಸಿದ ಧೀಮಂತ ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು.

ಕನ್ನಡಸೇನೆ ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್ ಮಾತನಾಡಿ ನಾಡು ಮತ್ತು ದೇಶಕಂಡ ಅಪರೂಪದ ರಾಜಕಾರಣಿಯಾಗಿ ಬಡವರು, ದೀನದಲಿತರು ಹಾಗೂ ಶೋಷಿತರ ಧ್ವನಿಕ್ಕೆ ಧ್ವನಿಗೂಡಿಸಿದ ಜನನಾಯಕ ಎಂ.ಎಸ್.ಕೃಷ್ಣ ಎಂದ ಅವರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ವಿಕಾಸಸೌಧ ನಿರ್ಮಾಣಕ್ಕೆ ಅಡಿಪಾಯ ಹಾಕಿರುವ ಕೀರ್ತಿ ಅವರಿಗೆ ಸಲ್ಲಲಿದೆ ಎಂದರು.

ಈ ಸಂದರ್ಭದಲ್ಲಿ ಕನ್ನಡಸೇನೆ ಜಿಲ್ಲಾ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಮುಖಂಡರುಗಳಾದ ಅನ್ವರ್, ಕಳವಾಸೆ ರವಿ, ರಮೇಶ್, ಚೈತ್ರಗೌಡ, ಮುಖಂಡರುಗಳಾದ ಬಿ.ಎಂ.ಕುಮಾರ್, ಎಲ್.ವಿ.ಕೃಷ್ಣ ಮೂರ್ತಿ ಮತ್ತಿತರರು ಹಾಜರಿದ್ದರು.

———————–——ಸುರೇಶ್

Leave a Reply

Your email address will not be published. Required fields are marked *

× How can I help you?