ಚಿಕ್ಕಮಗಳೂರು-ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ಅನ್ನಪೂರ್ಣ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಶೈಲಾ ಸೇರಿದಂತೆ ತಾಲ್ಲೂಕು ಹಾಗೂ ನಗರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಅಶೋಕ್ ಕೆಂಪನಹಳ್ಳಿ ತಿಳಿಸಿದರು.
ನಗರದ ಹೇಮಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಜಿಲ್ಲಾ ಸಾಂಸ್ಕೃತಿಕ ಘಟಕಕ್ಕೆ ಅಧ್ಯಕ್ಷೆ ಹರುಣಾಕ್ಷಿ, ಕರವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿರಾಜೇಶ್ವರಿ, ಉಪಾಧ್ಯಕ್ಷರಾಗಿ ಸುಮ, ರತ್ನ, ಕಾರ್ಯದರ್ಶಿಯಾಗಿ ವಿಜಯಲಕ್ಷ್ಮಿ,ತಾಲ್ಲೂಕು ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ಭಾರತಿ ಅವರನ್ನು ನೇಮಿಸಲಾಗಿದೆ.
ನಗರ ಘಟಕದ ಅಧ್ಯಕ್ಷೆಯಾಗಿ ಮಂಜುಳಾಬಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಸಂಗೀತ, ಉಪಾಧ್ಯಕ್ಷರಾಗಿ ಲತಾ, ರೇಖಾ, ಕಾರ್ಯದರ್ಶಿಯಾಗಿ ಆಶಾ ಹಾಗೂ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಚಂದನ ಅವರನ್ನು ನೇಮಿಸಿದ್ದು ಕನ್ನಡಹಬ್ಬ ಹಾಗೂ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸ ಬೇಕು ಎಂದು ಸೂಚಿಸಿದರು.
——————-ಸುರೇಶ್