ಚಿಕ್ಕಮಗಳೂರು-ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಆರ್.ಭರತ್, ಕಾನೂನು ಸಲಹೆಗಾರರಾಗಿ ಕೆ.ಎಲ್.ಪ್ರಸಾದ್ ಹಾಗೂ ಹೃತಿಕ್ ಸೇರಿದಂತೆ 30ಕ್ಕೂ ಹೆಚ್ಚು ಮಂದಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ನಾಗವಾರ ರಮೇಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಕರವೇ ಸಭೆಯಲ್ಲಿ ಚಿಕ್ಕಮಗಳೂರು ತಾಲ್ಲೂಕು,ನಗರ, ಯುವಘಟಕ, ವಿದ್ಯಾರ್ಥಿ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷರಾಗಿ ಎಸ್.ಪವನ್, ಉಪಾಧ್ಯಕ್ಷ ಈಶ್ವರ್, ಪ್ರಧಾನ ಕಾರ್ಯದರ್ಶಿ ಬಿ.ಜಿ.ರಂಜಿತ್, ಯುವಘಟಕದ ಅಧ್ಯಕ್ಷ ಎಂ.ಎಸ್.ಸುನೀಲ್, ಉಪಾಧ್ಯಕ್ಷ ಕೆ.ಪ್ರಮೋದ್, ಪ್ರಧಾನ ಕಾರ್ಯ ದರ್ಶಿಗಳಾಗಿ ವೈ.ಈ.ಭರತ್, ಎಸ್.ಸಂತೋಷ್, ನಗರ ಅಧ್ಯಕ್ಷರಾಗಿ ವಿವೇಕ್‌ಗೌಡ, ಉಪಾಧ್ಯಕ್ಷರಾಗಿ ಪ್ರಜ್ವಲ್, ಮನೋಜ್, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್‌ಕುಮಾರ್, ನಿಶಾಂತ್, ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಟಿ.ಆರ್.ರಿತೀಶ್, ಉಪಾಧ್ಯಕ್ಷ ಪಿ.ಆರ್.ಭವಿಷ್‌ಗೌಡ, ಪ್ರಧಾನ ಕಾರ್ಯದರ್ಶಿ ಆರ್.ರತನ್, ನಗರ ಯುವಘಟಕದ ಅದ್ಯಕ್ಷ ಗಿರಿವರ್ಧನ್, ಉಪಾಧ್ಯಕ್ಷ ಆಕಾಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಸುನೀಲ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರವೇ ಕಡೂರು ತಾಲ್ಲೂಕು ಅಧ್ಯಕ್ಷ ಸತೀಶ್, ತರೀಕೆರೆ ಉಪಾಧ್ಯಕ್ಷ ಸಂತೋಷ್, ಪ್ರಧಾನ ಕಾರ್ಯದರ್ಶಿ ರವಿನಾಯಕ್ ಮತ್ತಿತರರು ಹಾಜರಿದ್ದರು.