
ಚಿಕ್ಕಮಗಳೂರು-ಹಕ್ಕು ಮತ್ತು ಕರ್ತವ್ಯ ವಿಶ್ಲೇಷಿಸಿರುವ ‘ಸಿದ್ಧಾಂತ ಶಿಖಾಮಣಿ’ ಬದುಕಿನ ನಿಯಾಮಾವಳಿಯನ್ನು ರೂಪಿಸಿ ಆಧುನಿಕ ಸಂವಿಧಾನಕ್ಕೆ ಮೂಲ ಎನಿಸಿದೆ ಎಂದು ಕಾರ್ಜುವಳ್ಳಿ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಆಲೂರು ತಾಲ್ಲೂಕು ಕಾರ್ಜುವಳ್ಳಿ ಸಂಸ್ಥಾನ ಹಿರೇಮಠ ಆಯೋಜಿಸಿದ್ದ ‘ಮನೆಮನೆಗೆ ರೇಣುಕ-ಮನಮನಕ್ಕೆ ರೇಣುಕ ಸಿದ್ಧಾಂತ ಶಿಖಾಮಣಿ ತತ್ವ ಪ್ರಚಾರದ ಅಭಿಯಾನದ ಅಂಗವಾಗಿ ವಿರುಪಾಪುರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು
ಮನುಷ್ಯ ಹೇಗೆ ಬಾಳಿ ಬದುಕಿದರೆ ದೇವತಾ ಸ್ಥಾನ ಪಡೆದುಕೊಳ್ಳಬಹುದೆಂಬುದನ್ನು ನಿರೂಪಿಸುವ ಸಿದ್ಧಾಂತ ಶಿಖಾಮಣಿ ಅತ್ಯಂತ ವೈಜ್ಞಾನಿಕವಾದ ವಿಚಾರಗಳನ್ನು ಒಳಗೊಂಡ ಹಿರಿಮೆ- ಗರಿಮೆ ಹೊಂದಿದೆ. ವೀರಶೈವ ಸಿದ್ಧಾಂತದ ಸಂವಿಧಾನ ಇದಾಗಿದ್ದು, ಗುರುವಿನಿಂದ ಲಿಂಗದೀಕ್ಷೆ ಪಡೆಯುವ ಹಕ್ಕನ್ನು ನೀಡುವುದರ ಜೊತೆಗೆ ಲಿಂಗಪೂಜೆ ಧರ್ಮಾಚರಣೆಯ ಕರ್ತವ್ಯ ವನ್ನು ಪ್ರಮುಖವಾಗಿ ವಿಷದಪಡಿಸಿದೆ ಎಂದರು.
ವೀರಶೈವ ಧರ್ಮಕ್ಕೆ ಇನ್ನೊಂದು ಹೆಸರು ಮಾನವ ಧರ್ಮ. ಭೂಮಂಡಲದ ಸಮಸ್ತರಿಗೂ ಕಲ್ಯಾಣವನ್ನು ಬೋಧಿಸಿದೆ. ಕಾವಾಂಕ- ವಾತುಲ ಸೇರಿದಂತೆ 28 ಆಗಮನಗಳನ್ನು ಪ್ರಧಾನವಾಗಿ ಪರಿಗಣಿಸಿದ್ದು ವೀರಶೈವ ಎನಿಸಿಕೊಂಡರೆ ವೇದಗಳನ್ನು ಆಧರಿಸಿದ್ದು ವೈದಿಕ ಎಂದು ವಿವರಿಸಿದ ಸ್ವಾಮೀಜಿ, ಆಗಮಗಳು ಶಿವವಾಣಿ. ಪಾರ್ವತಿದೇವಿ ಕೇಳಿಸಿಕೊಂಡು ವಿಷ್ಣು ಒಪ್ಪಿಕೊಂಡಿದೆ0ದು ಶ್ಲೋಕ ಉದಾಹರಿಸಿದರು.
ಕೊಲನುಪಾಕಿಯಲ್ಲಿ ಆವಿರ್ಭವಿಸಿದ ಶ್ರೀಜಗದ್ಗುರು ರೇಣುಕಾಚಾರ್ಯರು ಅಲ್ಲಿ 18 ಕುಲಗಳಿಗೆ ಮಠಗಳನ್ನು ಸ್ಥಾಪಿಸಿ ಸಮತಾದೃಷ್ಟಿಯಿಂದ ಎಲ್ಲರೂ ಬದುಕಬೇಕೆಂದು ಬೋಧಿಸಿ ಮನುಕುಲದ ಉದ್ಧಾರಕ್ಕೆ ನಾಂದಿಯಾದ ಹಿನ್ನಲೆಯಲ್ಲಿ ಆದಿ ಜಗದ್ಗುರುಗಳೆನುಸುತ್ತಾರೆ. ಕೃಷಿ, ದಾಸೋಹ ಪರಂಪರೆ ಸೇರಿದoತೆ 108ಕ್ರಾಂತಿಗಳನ್ನು ಮಾಡುವ ಮೂಲಕ ಬಾಳಿ ಬದುಕುವ ಸಂಸ್ಕೃತಿಯ ನ್ನು ಹೇಳುತ್ತಾರೆ. ಶಕ್ತಿ-ಯುಕ್ತಿ ಅರಿತು ಜಿಜ್ಞಾಸೆಗಳನ್ನು ಅರ್ಥಮಾಡಿಕೊಂಡು ಶಿಷ್ಯನನ್ನೆ ಹುಡುಕಿ ಕೊಂಡು ಬoದು ಧರ್ಮಬೋಧನೆ ಮಾಡುತ್ತಾರೆ. ಕಬ್ಬಿಗರ ಅಗಸ್ತ್ಯರು ಮೊದಲ ಉಪದೇಶ ಪಡೆಯುತ್ತಾರೆ. ಮಾತಂಗನ ಮಗನಿಗೆ ಲಿಂಗದೀಕ್ಷೆ ನೀಡಿ ಉದ್ಧರಿಸುವುದರ ಜೊತೆಗೆ ಮಹಿಳೆ ಯರಿಗೆ ಧಾರ್ಮಿಕ ಸ್ವಾತಂತ್ರ್ಯ ಕರುಣಿಸಿ ಇಷ್ಟಲಿಂಗ ಕಟ್ಟುತ್ತಾರೆಂದು ವಿವರಿಸಿದರು.
ಕಾಲಾನoತರ ಆತ್ಮಕ್ಕಿಂತ ಶರೀರ ಮಹತ್ವವೆಂಬ ಚಾರುವಾಕರ ವಿಚಾರಗಳು ಸಮಾಜದಲ್ಲಿ ಮುನ್ನಲೆಗೆ ಬಂದ ಸಂದರ್ಭದಲ್ಲಿ ಶ್ರೀ ಶಿವಯೋಗಿ ಶಿವಾಚಾರ್ಯರು ಅಗಸ್ತ್ಯ -ರೇಣುಕ ಸಂವಾದವನ್ನು ಕೃತಿರೂಪದಲ್ಲಿ ಸಂಗ್ರಹಿಸಿದ್ದೇ “ಶ್ರೀ ಸಿದ್ಧಾಂತ ಶಿಖಾಮಣಿ” ಎಂದ ಕಾರ್ಜುವಳ್ಳಿ ಶ್ರೀಗಳು, ಧರ್ಮಮಾರ್ಗದಲ್ಲಿ ಮಾನವ ಸಾಗಲು ಮಾರ್ಗದರ್ಶಿ ಸದ್ಗ್ರಂಥ ಇದೆಂದರು.
ಚಿಕ್ಕಮಗಳೂರು ಜಂಗಮ ಸಮಾಜದ ಸಂಚಾಲಕ ಚಿ.ಸ.ಪ್ರಭುಲಿoಗಸಾಚ್ಸ್ತ್ರಿ ಶ್ರೀಮಠ ಪ್ರಕಟಿಸಿ ರುವ 2025ರ ಧಾರ್ಮಿಕ ದಿನದರ್ಶಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ವೀರಶೈವ ಎಂಬುದು ತತ್ವ -ಸಿದ್ಧಾಂತ. ಹುಟ್ಟಿನಿಂದಷ್ಟೇ ಅಲ್ಲ ಆಚರಣೆಯಿಂದ ವೀರಶೈವರಾಗಬೇಕು. ಶಿವನನ್ನು ಆರಾಧಿಸುವ, ಹಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ, ಎದೆಯಮೇಲೆ ಇಷ್ಟಲಿಂಗ ಧಾರಣೆ ಪ್ರಮುಖ ಲಾಂಛನ. ‘ನಾನು ಬದುಕಿ ಮತ್ತೊಬ್ಬರನ್ನು ಬದುಕಲು ಬಿಡು’ ಎಂಬುದೇ ಪ್ರಮುಖ ಅಂಶ. ಜಗತ್ತಿನಲ್ಲಿ ಎಲ್ಲರೂ ಪರಸ್ಪರ ಸಹಕಾರ, ಸಹಬಾಳ್ವೆ, ಶಾಂತಿ-ನೆಮ್ಮದಿಯ ಬದುಕಿಗೆ ಸಿದ್ಧಾಂತಶಿಖಾಮಣಿ ಸದ್ಗ್ರಂಥ ಬೆಳಕಾಗಿದೆ ಎಂದರು.

ಕರ್ನಾಟಕ ರಾಜ್ಯ ವೀರಶೈವ ಅರ್ಚಕ-ಪರೋಹಿತರ ಸಂಘದ ಕಾರ್ಯದರ್ಶಿ ದೇವರಾಜಶಾಸ್ತ್ರೀ ಪ್ರಾಸ್ತಾವಿಕವಾಗಿ ಮಾತನಾಡಿ ಪಂಚಾಚಾರ, ಅಷ್ಟಾವರಣ, ಷಟ್‌ಸ್ಥಲಗಳು ವೀರಶೈವ ಆಚರಣೆಯ ಪ್ರಮುಖ ಅಂಶ. ಇದರಲ್ಲಿ 19ಅಂಶಗಳು ವೀರಶೈವರ ಬದುಕಿಗೆ ಆಧಾರಸ್ತಂಭ. ಆದಿಜಗದ್ಗುರು ಶ್ರೀರೇಣುಕಾಚಾರ್ಯರು 108 ಸ್ಥಲಗಳನ್ನು ಸೂಚಿಸುವ ಮೂಲಕ ಮಾನವ ಶಿವನಾಗುವ ಸಂಗತಿಗಳನ್ನು ವಿವರಿಸಿದ್ದಾರೆ. ವೀರಶೈವ ತತ್ವತ್ರಯಗಳನ್ನು ಅನುಸರಿಸಿ ಒಂದೊoದೇ ಮೆಟ್ಟಿಲುಗಳನ್ನು ಏರಿ ಮೋಕ್ಷ ಪಡೆಯುವ ಉನ್ನತ ಅವಕಾಶವಿದೆ ಎಂದರು.
ಸಮಾಜದ ಹಿರಿಯರಾದ ವೇ.ಮೂ.ವೀರತ್ತಯ್ಯ, ಶೋಭಾಚಂದ್ರಶೇಖರಯ್ಯ, ವಿಶ್ರಾಂತಶಿಕ್ಷಕ ಪರಮೇಶ್,ಪುರೋಹಿತ ವೇ.ಮೂ.ದರ್ಶನ್ ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು. ಪೂರ್ಣಿಮಾ ಉಮೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ್ ಪ್ರಾರ್ಥಿಸಿದ್ದು, ವೇ.ಮೂ.ಶಶಿಕು ಮಾರಶಾಸ್ತ್ರೀ ವಂದಿಸಿದರು.