ಚಿಕ್ಕಮಗಳೂರು-ರಾಜ್ಯ ಕಂಟ್ರಾಕ್ಟರ್ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅಕಾಲಿಕವಾಗಿ ನಿಧನ ಹೊಂದಿದ ಹಿನ್ನೆಲೆ ಸೋಮವಾರ ಜಿಲ್ಲಾ ಕಂಟ್ರಾಕ್ಟರ್ ಅಸೋಸಿಯೇಷನ್ ವತಿಯಿಂದ ಕಚೇರಿಯಲ್ಲಿ ಭಾವಚಿತ್ರಕ್ಕೆ ನಮನ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಿದರು.
ಈ ವೇಳೆ ಮಾತನಾಡಿದ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಕೆ.ಎಸ್.ಶಾಂತೇಗೌಡ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ದಿ|| ಕೆಂಪಣ್ಣರವರು ಸಂಘವನ್ನು ಸಂಘಟಿಸುವುದರಲ್ಲಿ ಅತಿಹೆಚ್ಚು ಶ್ರಮವಹಿಸಿ ಗುತ್ತಿಗೆದಾರರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದರು ಎಂದರು.
ರಾಜ್ಯದಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆ ನಿರ್ವಹಿಸುವ ಮೂಲಕ 2016ರಲ್ಲಿ ರಾಜ್ಯಾದ್ಯಕ್ಷ ಹುದ್ದೆ ಅಲಂಕರಿಸಿದರು.ಇವರ ಅವಧಿಯಲ್ಲಿ ಎರಡು ಯಶಸ್ವಿ ಸಮ್ಮೇಳನಗಳನ್ನು ನಡೆಸಿ ಗುತ್ತಿಗೆದಾರರ ಹಲವು ಬೇಡಿಕೆಗಳನ್ನು ಈಡೇರಿಸುವಲ್ಲಿ ಶ್ರಮಿಸಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಸೋಸಿಯೇಷನ್ ಉಪಾಧ್ಯಕ್ಷ ಬಿ.ಎ.ನಾಗರಾಜು, ಕಾರ್ಯದರ್ಶಿ ಬಿ.ಎಂ.ಪುಟ್ಟಸ್ವಾಮಿ, ಸಹ ಕಾರ್ಯದರ್ಶಿ ಕೆ.ವಿ.ಮಂಜುನಾಥ್, ಖಜಾಂಚಿ ಸಿ.ಎಸ್.ಖಲಂಧರ್, ಸದಸ್ಯರು ಗಳಾದ ವೆಸ್ಲಿಪಿಂಟೋ, ಕೆ.ಎನ್.ದೊಡ್ಡೇಗೌಡ, ಎಂ.ಎ.ರವಿಕುಮಾರ್, ಎ.ಟಿ.ಅನೂಪ್ಕುಮಾರ್, ನಗರಸಭೆ ಸದಸ್ಯರಾದ ಶಹಬಾದ್, ಮುಖಂಡರುಗಳಾದ ಬಿ.ಸಿ.ಭದ್ರೇಗೌಡ, ಗಂಗಾಧರ್, ವಿ.ಟಿ.ನಿಂಗ ರಾಜು, ಎಲ್.ಜಿ.ಕೃಷ್ಣ, ಟಿ.ಎ. ನಿಂಗೇಗೌಡ ಮತ್ತಿತರಿದ್ದರು.
—————–ಸುರೇಶ್