ಚಿಕ್ಕಮಗಳೂರು-ತಾಲ್ಲೂಕಿನಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಸ್ಥಳಾವಕಾಶಕ್ಕೆ ಒತ್ತಾಯ

ಚಿಕ್ಕಮಗಳೂರು-ಕ್ರಿಕೇಟ್ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಹಾಗೂ ಕ್ರೀಡಾಕೂಟ ಹಮ್ಮಿಕೊಳ್ಳಲು ತಾಲ್ಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಸ್ಥಳಾವಕಾಶ ಕಲ್ಪಿಸಿಕೊಡಬೇಕು ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಸೋಮವಾರ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.

ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರನ್ನು ಭೇಟಿ ಮಾಡಿದ ಅವರು ತಾಲ್ಲೂಕಿನಲ್ಲಿ ಲೆದರ್‌ಬಾಲ್ ಕ್ರಿಕೇಟ್ ಕ್ರೀಡಾಂಗಣಕ್ಕೆ ಸ್ಥಳಾವಕಾಶದ ಕೊರತೆಯಿದೆ. ಹೀಗಾಗಿ ಜಿಲ್ಲಾಡಳಿತ ಕನಿಷ್ಟ 8 ಎಕರೆ ಭೂಮಿ ನೀಡಿದರೆ ಗುತ್ತಿಗೆ ಮೇರೆಗೆ ಅಭಿವೃದ್ಧಿಪಡಿಸಿ ಲೆದರ್ ಬಾಲ್ ಕ್ರೀಡಾಪಟುಗಳಿಗೆ ತರಬೇತಿ ಹಾಗೂ ಆಟೋಟಕ್ಕೆ ಅನುಕೂಲವಾಗಲಿದೆ ಎಂದು ಮನವಿ ಮಾಡಿಕೊಂಡರು.

ಜಿಲ್ಲೆಯಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳು ಸಮರ್ಪಕ ಕ್ರೀಡಾಂಗಣವಿಲ್ಲದೇ ಅವಕಾಶದಿಂದ ವಂಚಿತರಾಗಬಾರದೆಂಬ ದೃಷ್ಟಿಯಿಂದ ಕ್ರಿಕೇಟ್ ಮೈದಾನ ನಿರ್ಮಿಸುವ ಉದ್ದೇಶವಿದೆ. ಅಲ್ಲದೇ ಸಾರ್ವಜನಿಕರಿಗೆ ವಾಕಿಂಗ್ ಅವಕಾಶವನ್ನು ಕಲ್ಪಿಸಿಕೊಡುವ ಆಕಾಂಕ್ಷಿಯಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕ್ರಿಕೇಟ್ ಅಸೋಸಿಯೇಷನ್ ಶಿವಮೊಗ್ಗ ವಲಯ ಸಂಚಾಲಕ ಸದಾ ನಂದ, ನಿಕಟಪೂರ್ವ ವಲಯ ಸಂಚಾಲಕ ಡಿ.ಆರ್ ನಾಗರಾಜ್, ಶಿವಮೊಗ್ಗ ವಲಯ ಸಮಿತಿ ಸದಸ್ಯರಾದ ಹರೀಶ್, ಅಶೋಕ್, ಚಿಕ್ಕ ಮಗಳೂರು ಕ್ರಿಕೆಟ್ ಕ್ಲಬ್‌ನ ಕಾರ್ಯದರ್ಶಿ ಶಶಿಕುಮಾರ್, ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್‌ನ ಸೈಯದ್ ಅಲಿ, ಸ್ಥಳಿಯ ವಲಯ ಸಂಚಾಲಕ ರಾಣಾ ಸ್ಪೋರ್ಟ್ಸ್ ಕ್ಲಬ್‌ನ ಹರೀಶ್ ಇದ್ದರು.

———-—ಸುರೇಶ್

Leave a Reply

Your email address will not be published. Required fields are marked *

× How can I help you?