ಚಿಕ್ಕಮಗಳೂರು-ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಕೆ.ಸಿ.ಕೆಂಗೇಗೌಡ, ಉ ಪಾಧ್ಯಕ್ಷರಾಗಿ ಎಲ್.ವಿ.ರಾಜು ಸೇರಿದಂತೆ ಪದಾಧಿಕಾರಿ ಗಳನ್ನ ಮಂಗಳವಾರ ಕೃಷಿ ಇಲಾಖೆ ಕಚೇರಿಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಎಲ್.ಆರ್.ಬಸವರಾಜು (ಗೌರವ ಕಾರ್ಯದರ್ಶಿ), ಹಾಲೇಗೌಡ (ಖಜಾಂಚಿ), ಎ.ಕೆ.ವಸಂತೇ ಗೌಡ (ಜಿಲ್ಲಾ ಪ್ರತಿನಿಧಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಸುಜಾತ ಅಧಿಕೃತವಾಗಿ ಘೋಷಿಸಿದರು.
ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಕೆ.ಸಿ.ಕೆಂಗೇಗೌಡ, ರೈತರಿಗೆ ಸಹಕರಿಸುವ ನಿಟ್ಟಿನಲ್ಲಿ ಇಲಾಖೆ ಹಾಗೂ ರೈತರ ಮಧ್ಯೆ ಸೇತುವೆಯ ಕೊಂಡಿಯಾಗಿ ಕಾರ್ಯನಿರ್ವಹಿಸಿ ಸಮಗ್ರ ಸೌಲಭ್ಯಗಳನ್ನು ಪೂರೈಸುವ ಕಾರ್ಯಕ್ಕೆ ಮೊದಲ ಹೆಜ್ಜೆ ತಮ್ಮದಾಗಲಿದೆ ಎಂದು ತಿಳಿಸಿದರು.
ರೈತ ಕುಟುಂಬದ ಜನಿಸಿದ ತಮಗೆ ರೈತರ ಸಂಕಷ್ಟದ ಬಗ್ಗೆ ಅರಿವಿದೆ. ಹೀಗಾಗಿ ರೈತಾಪಿ ವರ್ಗದ ಬೆಳೆಗಳಿಗೆ ನೀರು ಅತಿಮುಖ್ಯವಾಗಿದೆ. ಹಾಗಾಗಿ ಕಣಿವೆದಾಸರಹಳ್ಳಿ, ಮಾದರಸಕೆರೆ, ಕಳಸಾಪುರ, ಈಶ್ವರಹಳ್ಳಿ ಹಾಗೂ ತಿಮ್ಮಪ್ಪಯ್ಯನಕೆರೆ ಮೂಲಕ ಬೆಳವಾಡಿಕೆರೆ ನೀರು ಹರಿಸುವ ಕೆಲಸವನ್ನು ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಮಾಜಿ, ಹಾಲಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸಹಕಾರದಿಂದ ಹಂತ ಹಂತವಾಗಿ ಕಾಮಗಾರಿ ನಡೆದಿದೆ ಎಂದ ಅವರು ಇನಷ್ಟು ಸದಾಕಾಲ ಸುಗಮವಾಗಿ ನೀರು ಹರಿಸುವ ಕೆಲಸಕ್ಕೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಾಜದ ಸದಸ್ಯರುಗಳಾದ ಜಿ.ಮಲ್ಲಿಕಾರ್ಜುನ ಪ್ರಸನ್ನ, ಕೆ.ಪಿ.ಧನರಾಜು, ಎಂ. ಎಂ.ಜಯರಾo, ಹೆಚ್.ಸಿ.ಸಿದ್ದೇಗೌಡ, ಬಿ.ಸೋಮಶೇಖರ್, ಜಿ.ಎಂ.ಮೂರ್ತಿ, ಕೆ.ವಿ.ಸೋಮಶೇಖರ್, ಮಲ್ಲೇಶಯ್ಯ, ಕೆ.ಹೆಚ್.ಕುಮಾರಸ್ವಾಮಿ ಕೆ.ಪಿ.ರುದ್ರೇಗೌಡ ಮತ್ತಿತರರಿದ್ದರು.
—-———–ಸುರೇಶ್