ಚಿಕ್ಕಮಗಳೂರು-ತಾಲ್ಲೂಕಿನ ಮರ್ಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜಯಂತಿ ರಾಜೇಗೌಡ ಸೋಮವಾರ ಅವಿರೋಧ ಆಯ್ಕೆಯಾದರು.
ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಯಂತಿ ರಾಜೇಗೌಡ ಹೊರತುಪಡಿಸಿ ಬೇರ್ಯಾವ ಉಮೇದುವಾರಿಕೆ ಸಲ್ಲಿಕೆಯಾದ ಹಿನ್ನೆಲೆ ಚುನಾವಣಾಧಿಕಾರಿ ಶಿವಕುಮಾರ್ ಅವರು ಜಯಂತಿ ರಾಜೇಗೌಡರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಈ ವೇಳೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಬಿಜೆಪಿ ಮುಖಂಡ ದೀಪಕ್‌ದೊಡ್ಡಯ್ಯ ಪ್ರಜಾಪ್ರಭುತ್ವ ದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮೂಲ ಬೇರುಗಳಿದ್ದಂತೆ.ಇಂಥ ಹುದ್ದೆಯನ್ನು ಅಲಂಕರಿಸಿರುವವರು ಅಂಭೇಡ್ಕರ್ ಸಂವಿಧಾನದ ಆಶಯದಂತೆ ಕೆಲಸ ನಿರ್ವಹಿಸಬೇಕು ಎಂದು ಸಲಹೆ ಮಾಡಿದರು.
ಕಳೆದ ಅನೇಕ ವರ್ಷಗಳಿಂದೆ ಅಧ್ಯಕ್ಷ ಸ್ಥಾನ ಎಂಬುದು ಉಳ್ಳವರು ಕೈಯಲ್ಲಿತ್ತು.ತದನಂತರ ಪ್ರಜಾ ಪ್ರಭುತ್ವ ಸಂವಿಧಾನದ ಮೂಲಕ ತಿದ್ದುಪಡಿ ತಂದು ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಸುವ ಮೂಲಕ ಮೀಸಲಾತಿ ಬದಲಾವಣೆಗೊಳಿಸಿದ ಕಾರಣ ರಾಜಕೀಯ ಹಿನ್ನೆಲೆ ಇಲ್ಲದವರು ಕೂಡಾ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.
ಜಿಲ್ಲಾ ಬಿಜೆಪಿ ಎಸ್.ಸಿ. ಘಟಕದ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ ಗ್ರಾ.ಪಂ.ಅಧ್ಯಕ್ಷರು ಗ್ರಾಮದ ಪ್ರಥಮ ಪ್ರಜೆಯಂತೆ.ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸುವ ಮೂಲಕ ಪರಿಹರಿಸುವುದು ಕರ್ತವ್ಯವಾಗಬೇಕು.ಆಗ ಮಾತ್ರ ಜನಮಾನಸದಲ್ಲಿ ಅಧಿಕಾರ ತ್ಯಜಿಸಿದರೂ ಶಾಶ್ವತವಾಗಿ ನೆಲೆಯೂರಲು ಸಾಧ್ಯ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಜಯಂತಿ ರಾಜೇಗೌಡ ಮಾತನಾಡಿ ಸದಸ್ಯರುಗಳ ಸಹಕಾರ ಮತ್ತು ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲೂ ತೊಡಕಾಗದಂತೆ ಸರ್ಕಾರದ ಸೌಲಭ್ಯಗಳನ್ನು ಜಾತಿ ತಾರತಮ್ಯವೆಸಗದೇ ಸಮಾನವಾಗಿ ಹಂಚಿಕೆಗೆ ಮುಂದಾಗುವ ಮೂಲಕ ಮರ್ಲೆ ಪಂಚಾಯಿತಿ ಹೆಸರನ್ನು ಉಳಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ನೆಟ್ಟೆಕೆರೆಹಳ್ಳಿ ಜಯಣ್ಣ, ಅಂಬಳೆ ಹೋಬಳಿ ಬಿಜೆಪಿ ಅಧ್ಯಕ್ಷ ಯೋಗೀಶ್, ಗ್ರಾ.ಪಂ. ಉಪಾಧ್ಯಕ್ಷೆ ಲೀಲಾವತಿ ನಾಗರಾಜ್, ಸದಸ್ಯರುಗಳಾದ ಸುಧಾ ಮಂಜುನಾ ಥ್, ಎಂ.ಎಸ್.ಚAದ್ರಪ್ಪ, ಭಾಗ್ಯ ಮಲ್ಲೇಶ್, ಎಂ.ಈ.ಸುರೇಶ್, ಹೂವಮ್ಮ ಮೊಗಣ್ಣ, ರೂಪ ಎಸ್.ಚಿಕ್ಕಣ್ಣ, ಜಿ.ಸಿ.ಬಸವರಾಜು, ಎಂ.ಈ.ರಾಜು, ಎಂ.ಎನ್.ರಮೇಶ್, ವೆಂಕಟಮ್ಮ ಪಾಪಣ್ಣ, ಟಿ.ಎಸ್.ಜಗದೀಶ್, ಗೌರ ಮ್ಮ ಕೃಷ್ಣ, ಕೆ.ಪಿ.ಶ್ರೀಧರ್, ಮುಖಂಡ ಮಣೇನಹಳ್ಳಿ ರಾಜು, ಗ್ರಾಮಸ್ಥರಾದ ಹರೀಶ್, ಸುನೀತಾ ನಾಗರಾಜು, ಭವ್ಯ ಗೋವಿಂದೇಗೌಡ, ಚಂದ್ರೇಗೌಡ, ಹನುಮಂತೇಗೌಡ, ಮಂಜುನಾಥ್, ನಾಗೇಗೌಡ, ಮಂಜೇಗೌಡ, ಪ್ರಕಾಶ್ ಮತ್ತಿತರರಿದ್ದರು.
—————–ಸುರೇಶ್