ಚಿಕ್ಕಮಗಳೂರು-ಮೂಗ್ತಿಹಳ್ಳಿ ಗ್ರಾ.ಪಂ ನೂತನ ಉಪಾಧ್ಯಕ್ಷರಾಗಿ ಅಂಬಿಕಾ ಮಧುಸೂಧನ್ ಅವಿರೋಧ ಆಯ್ಕೆ

ಚಿಕ್ಕಮಗಳೂರು-ತಾಲ್ಲೂಕಿನ ಮೂಗ್ತಿಹಳ್ಳಿ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಂಬಿಕಾ ಮಧುಸೂದನ್ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

ಪಂಚಾಯಿತಿ ಸಭಾಂಗಣದಲ್ಲಿ ನಡೆದ ಉಪಾಧ್ಯಕ್ಷ ಸ್ಥಾನಕ್ಕೆ ಅಂಬಿಕಾ ಹೊರತಾಗಿ ಬೇರ್ಯಾವ ಉಮೇದುವಾರಿಕೆ ಸಲ್ಲಿಕೆಯಾಗದ ಹಿನ್ನೆಲೆ ಚುನಾವಣಾಧಿಕಾರಿ ರಂಗನಾಥ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಬಳಿಕ ಮಾತನಾಡಿದ ನೂತನ ಉಪಾಧ್ಯಕ್ಷೆ ಅಂಬಿಕಾ ಮಧುಸೂದನ್, ಸರ್ವ ಸದಸ್ಯರುಗಳ ಸಹಕಾರದಿಂದ ಗ್ರಾಮಸ್ಥರ ಮೂಲಭೂತ ಅಗತ್ಯಗಳಾದ ಶುದ್ಧ ಕುಡಿಯುವ ನೀರು,ಸುರಕ್ಷಿತ ರಸ್ತೆ ಹಾಗೂ ವಿದ್ಯುತ್ ಕಂಬಗಳನ್ನು ಅಳವಡಿಸಿ ನಿವಾಸಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಸoವಿಧಾನದ ಅಧಿಕಾರದಡಿ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಸರ್ಕಾರಗಳ ಸೌಲಭ್ಯಗಳನ್ನು ಜಾತಿ ತಾರತಮ್ಯವೆಸಗದೇ ಸರ್ವರಿಗೂ ಸಮಾನವಾಗಿ ಹಂಚುವ ಮೂಲಕ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಹೂವಪ್ಪಶೆಟ್ಟಿ, ಸದಸ್ಯರುಗಳಾದ ಕೆ.ಆರ್.ಅಂಬಿಕಾ, ಸವಿತಾ, ಪದ್ಮಾ, ಎಂ.ಎಸ್.ಮoಜುನಾಥಗೌಡ, ಕಮಲಾಕ್ಷಿ, ನವೀನಕುಮಾರಿ, ಪದ್ಮ, ಎಂ.ಟಿ.ಪ್ರಭಾಕರ್, ಎಂ.ಎಸ್. ಸಂದೀಪ್, ಡಿ.ಎಂ.ಸತೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರೇಗೌಡ, ಗ್ರಾಮಸ್ಥರಾದ ಸುರಂಜನ್, ನಾಗೇಂದ್ರ ಪ್ರಸಾದ್, ಪಿಡಿಓ ರತ್ನಾಕರ್ ಮತ್ತಿತರರಿದ್ದರು.

——–-ಸುರೇಶ್

Leave a Reply

Your email address will not be published. Required fields are marked *

× How can I help you?