ಚಿಕ್ಕಮಗಳೂರು-ಮಸೀದಿ,ಮದರಸ ಹಾಗೂ ಶಾದಿಮಹಲ್‌ನ ಆಡಳಿತ ಅವಧಿ ಮುಗಿದರೂ ನೂತನ ಆಡಳಿತಕ್ಕೆ ಅವಕಾಶ ನೀಡದೇ ಭಾರೀ ಭ್ರಷ್ಟಚಾರದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಮುಸ್ಲೀಂ ಕೌನ್ಸಿಲ್ ಟ್ರಸ್ಟ್ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಗುರುವಾರ ಮನವಿ ಸಲ್ಲಿಸಿದೆ.
ಈ ಕುರಿತು ಮಾತನಾಡಿದ ಟ್ರಸ್ಟ್ನ ಸೈಯದ್ ಜಮೀಲ್ ಅಹಮ್ಮದ್, ನಗರದ ತಾಜೀರಾನ್ ಮಸೀದಿ, ಮದರಸ ಮದೀನತುಲ್ ಉಲೂಮ್ ಮತ್ತು ಶಾದಿಮಹಲ್‌ನ ಮೂರು ಸಂಸ್ಥೆಗಳ ಆಡಳಿತ ಪೂರ್ಣಗೊoಡು ಎಂಟು ತಿಂಗಳು ಕಳೆದರೂ ಹೊಸ ಆಡಳಿತ ನೇಮಿಸದೇ ವಕ್ಫ್ ಅಧಿಕಾರಿ, ಹಾಗು ಹಿಂದಿನ ಅಧ್ಯಕ್ಷರು ಅವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.
ಸಂಸ್ಥೆಗಳ ಅವ್ಯವಹಾರದ ಬಗ್ಗೆ ಈಗಾಗಲೇ ಜಿಲ್ಲಾ ವಕ್ಫ್ ಅಧಿಕಾರಿ,ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ವಿರುದ್ಧ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಈ ಸಂಸ್ಥೆಯಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಕೊಂಡ ಪರಿಣಾಮ ಮೇಲ್ಮಟ್ಟದವರೆಗೂ ಭ್ರಷ್ಟಚಾರದ ಕೂಪವಾಗಿದೆ ಎಂದು ಹೇಳಿದರು.
ಈ ಸಂಸ್ಥೆಯ ಅಧ್ಯಕ್ಷರು ಸುಮಾರು ಎರಡೂವರೆ ದಶಕಗಳಿಂದ ಸಂಸ್ಥೆಯನ್ನು ತಮ್ಮ ಕದಂಬ ಬಾಹುಗಳಲ್ಲಿ ಇಟ್ಟುಕೊಂಡಿದ್ದು ಯಾವುದೇ ಅಧಿಕಾರಿಗಳಿಗೆ ಕ್ಯಾರೆ ಎನ್ನದೇ ದುರಾಂಹಕಾರದಿoದ ಸ್ವಾಧೀನಪಡಿಸಿಕೊಂಡಿದ್ದಾರೆ. ಹಿಂದಿನ ಲೆಕ್ಕಪರಿಶೋಧನೆ ನಡೆದಿರುವುದಿಲ್ಲ.
ಕೂಡಲೇ ಜಿಲ್ಲಾಧಿಕಾರಿ ವಕ್ಫ್ ಸಚಿವ ಬಿ.ಜೆಡ್.ಜಮೀರ್ ಅಹಮ್ಮದ್‌ರವರಿಗೆ ಸಂಸ್ಥೆಗಳಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಕೂಲಂಕುಶ ಮಾಹಿತಿ ನೀಡುವ ಮುಖಾಂತರ ಲೋಪದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
———-ಸುರೇಶ್