ಚಿಕ್ಕಮಗಳೂರು-ನಾಡಗೀತೆಗೆ ಧಾರ್ಮಿಕ ಚೌಕಟ್ಟಿಲ್ಲ-ಸಮಾಜದ ನಾಗರೀಕರು ಗೌರವ ಸೂಚಿಸುವುದು ಅತಿಮುಖ್ಯ:ಗುಣನಾಥಸ್ವಾಮೀಜಿ

ಚಿಕ್ಕಮಗಳೂರು-ಮಕ್ಕಳಲ್ಲಿ ಕಲೆ,ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಅರಿವಿಲ್ಲದೇ ಹುದುಗಿರುತ್ತವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಪಾಲಕರು ಹಾಗೂ ಶಿಕ್ಷಕರ ಕರ್ತವ್ಯ ಎಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ, ಜಿ.ಪಂ. ತಾ.ಪಂ., ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಮನ್ವಯ ಸಂಪನ್ಮೂಲ ಕೇಂದ್ರ ಸಹಯೋಗದಲ್ಲಿ ನಗರದ ಹೌಸಿಂಗ್ ಬೋರ್ಡ್ ಸಮೀಪ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ಧ ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಬಾಲ್ಯದಿಂದಲ್ಲೇ ಒಂದೊಲ್ಲೊoದು ವಿಷಯಗಳಲ್ಲಿ ಆಸಕ್ತಿ ಹೊಂದಿರುವುದು ಸಹಜ. ಆ ಕಲಾಸಕ್ತಿಯನ್ನು ಸಮಾಜದ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ಹೀಗಾಗಿ ವಿದ್ಯಾರ್ಥಿಗಳ ಜೀವನದಲ್ಲೇ ಕಲೆಯನ್ನು ಪ್ರೋತ್ಸಾಹಿಸಿ ಗೌರವಿಸುವ ಕಾರ್ಯವಾಗಬೇಕಿದೆ ಎಂದರು.

ಪ್ರತಿಭಾ ಕಾರಂಜಿಗೆ ಚಿಕ್ಕಮಗಳೂರು ಜನ್ಮವಿತ್ತ ಪುಣ್ಯಭೂಮಿ. ಮಕ್ಕಳು ಪಠ್ಯದ ಜೊತೆಗೆ ಶೈ ಕ್ಷಣಿಕ, ಸಾಮಾಜಿಕವಾಗಿ ಬೆಳವಣಿಗೆ ಹೊಂದುವ ದೃಷ್ಟಿಯಿಂದ ಶಿಕ್ಷಣ ಮಂತ್ರಿ ಗೋವಿಂದೇಗೌಡ ಕಾಲದಲ್ಲಿ ಮಕ್ಕಳ ಮೇಳ ಎಂಬ ಹೆಸರಿನಲ್ಲಿ ಆರಂಭಗೊoಡು ಇದೀಗ ರಾಜ್ಯಾದ್ಯಂತ ಪ್ರತಿಭಾ ಕಾರಂಜಿ ರೂಪದಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು.

ಜ್ಞಾನಪೀಠ ಪ್ರಶಸ್ತಿ ವಿಜೇತ ಕುವೆಂಪುರವರ ನಾಡಗೀತೆಗೆ ಸಮಾಜದ ನಾಗರೀಕರು ಗೌರವ ಸೂಚಿಸುವುದು ಅತಿಮುಖ್ಯ. ನಾಡಿನ ಕವಿಸಂತರು, ದಾರ್ಶನಿಕರು ಹಾಗೂ ಪ್ರಸಿದ್ಧ ತಾಣಗಳನ್ನು ದೃಷ್ಟಿಯಟ್ಟುಕೊಂಡು ರಚಿಸಿರುವ ಮಹಾಕಾವ್ಯ ನಾಡಗೀತೆಗೆ ಧಾರ್ಮಿಕ ಚೌಕಟ್ಟಿಲ್ಲ,ಎಷ್ಟೇ ದೊಡ್ಡ ವ್ಯಕ್ತಿಯಾದರೂ ಎದ್ದು ನಿಂತು ಗೌರವಿಸದಿದ್ದರೆ ಸಾಧಕರಿಗೆ ಅವಮಾನಿಸದಂತೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ, ವಿದ್ಯಾರ್ಥಿಗಳ ಸೃಜನಶೀಲತೆ ಯನ್ನು ಹೊರತರುವ ಉದ್ದೇಶದಿಂದ ಸರ್ಕಾರ ಪ್ರತಿಭಾ ಕಾರಂಜಿ ಆಯೋಜಿಸಲಾಗಿದೆ. ವಿಜೇತರಾದವರು ಜಿಲ್ಲಾ, ರಾಜ್ಯಮಟ್ಟದಲ್ಲಿ ಸ್ಪರ್ಧಿಸಬಹುದು. ಸೋಲುಂಡವರು ದೃತಿಗೆಡದೇ ಭಾಗವಹಿಸಿರುವ ಅನುಭವವೇ ದೊಡ್ಡದೆಂದು ಅರಿತು ಮುಂದಿನ ಪ್ರಯತ್ನಕ್ಕೆ ಅಣಿಯಾಗಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿ ಪ್ರತಿಭಾ ಕಾರಂಜಿ ಆಯೋಜಿಸುವ ಉದ್ದೇಶವೇ ನಾಯಕತ್ವ ಗುಣ ಬೆಳೆಸುವುದಕ್ಕಾಗಿ ಎಂದ ಅವರು ತೀರ್ಪುಗಾರರು ಕಾರಂಜಿಯಲ್ಲಿ ಸ್ಪರ್ಧಿಸಿದ ಮಕ್ಕಳಲ್ಲಿನ ಸಮಗ್ರ ಕಲೆಯನ್ನು ಗುರುತಿಸಿ ಪ್ರಾಮಾಣಿಕಾಗಿ ಆಯ್ಕೆಗೊಳಿಸಿದರೆ ಭವಿಷ್ಯದಲ್ಲಿ ಆ ವಿದ್ಯಾರ್ಥಿ ಸಮಾಜದಲ್ಲಿ ಉನ್ನತ ಸ್ಥಾನಮಾನಗಳಿ ಸಲು ಸಾಧ್ಯ ಎಂದರು.

ನಗರಸಭೆ ಸದಸ್ಯೆ ಕವಿತಾ ಶೇಖರ್ ಮಾತನಾಡಿ, ವಿದ್ಯಾಭ್ಯಾಸದಲ್ಲಿನ ಮಕ್ಕಳ ಬದುಕು ಖಾಲಿಚೀಲವಿದ್ಧಂತೆ. ಶಿಕ್ಷಣ, ಸಾಂಸ್ಕೃತಿಕ ಹಾಗೂ ಕ್ರೀಡಾಚಟುವಟಿಕೆ ಎಂಬ ಜ್ಞಾನಭಂಡಾರವನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ತುಂಬಿಸಿ ಬಾಲ್ಯದಲ್ಲಿಯೇ ವಿದ್ಯಾರ್ಜನೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪಿಯು ಕಾಲೇಜು ಪ್ರಾಂಶುಪಾಲ ಸುರೇಂದ್ರ, ಪ್ರೌಢಶಾಖೆ ಮುಖ್ಯೋಪಾಧ್ಯಾಯ ಜಿ.ಆರ್.ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಸಿ.ರವೀಶ್, ಶಿಕ್ಷಣ ಸಂಯೋ ಜಕ ಟಿ.ಜಿಕೃಷ್ಣಮೂರ್ತಿ ರಾಜ್ ಅರಸ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರನಾಯ್ಕ್, ತಾಲ್ಲೂಕು ಅಧ್ಯಕ್ಷ ಗಂಗಾಧರ್, ಕಾರ್ಯದರ್ಶಿ ಪ್ರಹ್ಲಾದ್, ಸಹ ಶಿಕ್ಷಕರ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಉಮೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರೇಗೌಡ ಮತ್ತಿತರರು ಉಪಸ್ಥಿತರಿದ್ದರು.

———-ಸುರೇಶ್

Leave a Reply

Your email address will not be published. Required fields are marked *

× How can I help you?