ಚಿಕ್ಕಮಗಳೂರು-ನಗರಭೆಗೆ ಅನುದಾನ-ಕಾಂಗ್ರೆಸ್ ಸದಸ್ಯರುಗಳಿಂದ ಸಚಿವ ರಹೀಂ ಖಾನ್ ಭೇಟಿ-ಅನುದಾನಕ್ಕಾಗಿ ಮನವಿ

ಚಿಕ್ಕಮಗಳೂರು-ನಗರದ ಅಭಿವೃದ್ದಿ ದೃಷ್ಟಿಯಿಂದ ಚಿಕ್ಕಮಗಳೂರು ನಗರಸಭೆಗೆ ವಿಶೇಷ ಅನುದಾನ ಬಿಡುಗಡೆ ಗೊಳಿಸಬೇಕು ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯರುಗಳು ಮಂಗಳವಾರ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರಿಗೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ನಗರಸಭಾ ಸದಸ್ಯ ಮುನೀರ್ ಅಹ್ಮದ್ ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಅಮೃತ್ ಯೋಜನೆ ಅನುಷ್ಟಾನಗೊಂಡಿದ್ದು ನಗರಕ್ಕೆ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಲು ಸಾಧ್ಯವಿಲ್ಲದ ಕಾರಣ ಹೊಸದಾಗಿ ಜಾಕ್‌ವೆಲ್ ಮತ್ತು ನಗರದಲ್ಲಿ ನಾಲ್ಕು ಓವರ್‌ಹೆಡ್ ಟ್ಯಾಂಕ್ ಗಳು ಅವಶ್ಯವಿದೆ.ನಗರದ ಹಳೆ ಒಳಚರಂಡಿ ಸಂಪರ್ಕಗಳು ಕುಸಿಯುತ್ತಿರುವುದರಿಂದ ಬದಲಾಯಿಸಿ ಹೊಸದಾಗಿ ಒಳಚರಂಡಿ ಸಂಪರ್ಕ ನಿರ್ಮಿಸಬೇಕು.ಈ ಬಾರಿ ಮಳೆಗಾಲ ಹೆಚ್ಚಾದ ಕಾರಣ ನಗರಸಭಾ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ ಹಾಗೂ ಚರಂಡಿಗಳು ಹದಗೆಟ್ಟಿದೆ ಎಂದರು.

ಮುಖ್ಯ ರಸ್ತೆಗಳಲ್ಲಿ ಬೀದಿ ದೀಪಗಳು ಇಲ್ಲದಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ.ತುರ್ತಾಗಿ ಮೀಡಿಯನ್ ದೀಪಗಳನ್ನು ಅಳವಡಿಸಬೇಕು.ಬೇಲೂರು ಯಗಚಿ ಜಲಾಶಯದಲ್ಲಿ ಹೊಸದಾಗಿ ಜಾಕ್‌ವೆಲ್ ನಿರ್ಮಿಸುವುದು. ಶ್ರೀನಿವಾಸನಗರ, ಹೌಸಿಂಗ್ ಬೋರ್ಡ್, ಉಂಡೇದಾಸರಹಳ್ಳಿ, ಓವರ್‌ಹೆಡ್ ಟ್ಯಾಂಕ್ ಗಳನ್ನು ನಿರ್ಮಿಸುವುದು ಹಾಗೂ ಕಲ್ಲುದೊಡ್ಡಿಯಲ್ಲಿ ನೀರು ಶುದ್ದೀಕರಣ ಸ್ಥಾಪಿಸಬೇಕಾಗಿದ್ದು ಇದಕ್ಕಾಗಿ ತುರ್ತು ಅನುದಾನ ಒದಗಿಸಿಕೊಡುವಂತೆ ಮಾನ್ಯ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇ ಗೌಡ, ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ನಗರಸಭಾ ಸದಸ್ಯರುಗಳಾದ ಶಾದಬ್ ಆಲಂ ಖಾನ್, ಜಾವೀದ್, ಖಲಂಧರ್, ಲಕ್ಷ್ಮಣ್ , ಸಿ.ಪಿ.ಲಕ್ಷ್ಮಣ್ , ಇಂದಿರಾ, ಗುರುಮಲ್ಲಪ್ಪ, ಮಂಜುಳಾ ಲಕ್ಷ್ಮಣ್ , ಪರಮೇಶ್ ರಾಜ್ ಅರಸ್,ನಾಮಿನಿ ಸದಸ್ಯರುಗಳಾದ ಪ್ರಕಾಶ್ ರೈ, ಕೀರ್ತೀಶೆಟ್, ವಾಸೀಂ, ತಬ್ರೇಜ್, ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಸದಸ್ಯ ಅನ್ಸರ್ ಆಲಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *

× How can I help you?