ಚಿಕ್ಕಮಗಳೂರು-ತಿಪ್ಪನಹಳ್ಳಿ ಎಸ್ಟೇಟಿನ. ಎ.ಬಿ.ಮಲ್ಲಿಕಾರ್ಜುನ್ (74) ಇಂದು ಪೂರ್ವಾಹ್ನ 11.20ರ ವೇಳೆಗೆ ಬೆಂಗಳೂರಿನಲ್ಲಿ ಶಿವಕ್ಯರಾದರು.
ಕೈಮರ ಸಮೀಪದ ತಿಪ್ಪನಹಳ್ಳಿಯ ಅರಳುಗುಪ್ಪೆ ಮನೆತನದ ಮಾಜಿಶಾಸಕ ಎ.ಎಂ.ಬಸವೇಗೌಡ ಮತ್ತು ಎ.ಬಿ.ಗೌರಮ್ಮಬಸವೇಗೌಡ ಅವರ ಪ್ರಥಮ ಪುತ್ರರಾಗಿದ್ದ ಮಲ್ಲಿಕಾರ್ಜುನ್, ಕಳೆದ ನಾಲ್ಕು ದಶಕಗಳಿಂದ ಬೆಂಗಳೂರಿನಲ್ಲಿ ಕೈಗಾರಿಕೋದ್ಯಮಿಯಾಗಿ ನೆಲೆಸಿದವರು.ಯಶಸ್ವಿ ಉದ್ಯಮಿಯಾಗಿದ್ದ ಅವರು ಹಲವು ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರು.ಅಲ್ಪಕಾಲೀನ ದೈಹಿಕ ತೊಂದರೆಯಿoದ ಬಳಲುತ್ತಿದ್ದ ಅವರು,ಇಂದು ಪೂರ್ವಾಹ್ನ ವಿಧಿವಶರಾದರೆಂದು ಸಹೋದರ ಎ.ಬಿ.ಸುದರ್ಶನ್ ತಿಳಿಸಿದ್ದಾರೆ.
ಇಂದು ರಾತ್ರಿ ವೇಳೆಗೆ ಪಾರ್ಥಿವ ಶರೀರವನ್ನು ತಿಪ್ಪನಹಳ್ಳಿ ಎಸ್ಟೇಟಿನ ಮನೆಗೆ ಕರೆ ತರುತ್ತಿದ್ದು, ನಾಳೆ ಬೆಳಗ್ಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಧ್ಯಾಹ್ನ 3ಗಂಟೆಯ ನಂತರ ಅಲ್ಲೆ ಅಂತ್ಯಸ0ಸ್ಕಾರ ನೆರವೇರಿಸಲಾಗುವುದು.
ದಿವಂಗತರು ಪತ್ನಿ ಮಂಗಳಾ, ಪುತ್ರ ರಾಘವೇಂದ್ರ, ಪುತ್ರಿಯರಾದ ರಚನಾ ಮತ್ತು ಮೋಹಿತಾ ಸೇರಿದಂತೆ ಅಪಾರಬಂಧು-ಮಿತ್ರರನ್ನು ಅಗಲಿದ್ದಾರೆ.
ಸರಳ-ಸಜ್ಜನಿಕೆಯ ಮಲ್ಲಿಕಾರ್ಜುನ್ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಂತಾಪ ಸೂಚಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಜಿಲ್ಲಾ ಉಸ್ತುವಾರಿ ಸಚಿವರ ಮಾಧ್ಯಮ ಸಲಹೆಗಾರ ಐಸಿರಿ ಕಲ್ಯಾಣಕುಮಾರ್,ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯಭವನದ ಕಾರ್ಯದರ್ಶಿ ಸಿ.ವಿ.ಮಲ್ಲಿಕಾರ್ಜುನ್, ಖಜಾಂಚಿ ಯು.ಎಂ.ಬಸವರಾಜು, ಜಂಗಮ ಬಳಗದ ಸಂಚಾಲಕ ಪ್ರಭುಲಿಂಗಶಾಸ್ತ್ರೀ, ಸಾಹಿತಿ ಚಟ್ನಳ್ಳಿಮಹೇಶ್, ಕನ್ನಡಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ.ಶ್ರೀನಿವಾಸ್,ಯುನಿವರ್ಸಲ್ ಕಾಫಿ ಫೌಂಡೇಶನ್ 999,ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ,ಶ್ರೀಪಾರ್ವತಿ ಮಹಿಳಾ ಮಂಡಳಿ,ಅಕ್ಕಮಹಾದೇವಿ ಮಹಿಳಾ ಸಂಘ ಸೇರಿದಂತೆ ವಿವಿಧ ಸಂಘಸoಸ್ಥೆಗಳು ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿವೆ.