ಚಿಕ್ಕಮಗಳೂರು-ಪಿ,ಆರ್ ತಿಪ್ಪೆಸ್ವಾಮಿ ಜನ್ಮಶತಮಾನೋತ್ಸವದ ಸುಸಂದರ್ಭದಲ್ಲಿ ಕೊಡಮಾಡಲಾಗುವ ಪಿ,ಆರ್ ತಿಪ್ಪೆಸ್ವಾಮಿ ಪ್ರತಿಷ್ಟಾನ ಮೈಸೂರು 2024 ನೇ ಸಾಲಿನ ಅತ್ಯತ್ತಮ ಯುವಕಲಾ ಪ್ರಶಸ್ತಿಯನ್ನು ಚಿಕ್ಕಮಗಳೂರು ಜಿಲ್ಲೆಯ ಹೆಮ್ಮೆಯ ಮಹಿಳಾ ಕಲಾವಿದೆಯಾದ ಹಾಗೂ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಉಪನ್ಯಾಸಕಿಯಾದ ಶಿಲ್ಪ ಆಚಾರ್ಯರವರಿಗೆ ಹಾಗೂ ಕಲಾವಿದ ಎಂ.ಎಸ್.ಲಿಂಗರಾಜು,ಜನಪದ ವಸ್ತು ಸಂಗ್ರಹಕಾರ ಮೂಡಿಗೆರೆಯ ಅಶೋಕ್ ರವರಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪ್ರಶಸ್ತಿಯೊಂದಿಗೆ ಪಲಕ,ಶಾಲು, ಅಭಿನಂದನಾಪತ್ರ ಹಾಗೂ ನಗದು ಚೆಕ್ ನೀಡಿ ಪುರಸ್ಕಾರಿಸಿದ್ದಾರೆ.
ಕಾರ್ಯಕ್ರಮವನ್ನು ಮೈಸೂರಿನ ಶ್ರೀ ಕಲಾನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿತ್ತು.ಇದರೊಂದಿಗೆ ನಾಡಿನ ಹಿರಿಯ 10 ಜನ ಕಲಾವಿದರಿಗೆ ಜೀವಮಾನದ ಕಲಾ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಕೆ ಮರೀಗೌಡ, ಕನ್ನಡ ಅಭಿವೃದ್ಧಿ ಪ್ರಾದೀಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಲಲಿತಕಲಾ ಅಕಾಡಮಿ ಅಧ್ಯಕ್ಷರಾದ ಪ.ಸಾ.ಕುಮಾರ್, ಕನ್ನೆಡ ಪುಸ್ತಕ ಪ್ರಾದಿಕಾರದ ಅಧ್ಯಕ್ಷರಾದ ಡಾ.ಮಾನಸ ಶಿಲ್ಪಕಲಾ ಅಕಾಡಮಿ ಅಧ್ಯಕ್ಷರಾದ ಎಂ.ಸಿ ರಮೇಶ್ . ಪಿ ಆರ್.ಟಿ ಟ್ರಸ್ಟ್ ನ ಅಧ್ಯಕ್ಷರಾದ ರಾಜಶೇಖರ್ ಕದಂಬ. ಸಂಚಾಲಕ ರುದ್ರಣ್ಣ ಹರ್ತಿಕೋಟೆ,ಕಾರ್ಯದರ್ಶಿ ಕೆ.ಸಿ.ಮಹದೇವಶೆಟ್ಟಿ ರವರು ಉಪಸ್ಥಿತರಿದ್ದು ಅಭಿನಂದನೆ ತಿಳಿಸಿದರು.
———————ಪ್ರಕಾಶ್ ಕೋಟಿಗನಹಳ್ಳಿ