ಚಿಕ್ಕಮಗಳೂರು-ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಮೊದಲು ನಿಯೋಜಿಸಿದ್ಧ ಗ್ರಾಮದಲ್ಲೇ ಹಮ್ಮಿಕೊಳ್ಳಬೇಕು ಎಂದು ದಸಂಸ ಮುಖಂಡರುಗಳು ಬುಧವಾರ ಕ್ಷೇತ್ರ ಶಿಕ್ಷ ಣಾಧಿಕಾರಿ ಹೆಚ್.ಸಿ.ರವೀಶ್ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್, ಕರ್ತಿಕೆರೆ ಕ್ಲಸ್ಟರ್ ಮ ಟ್ಟದ 2024-25ನೇ ಸಾಲಿನ ಕಾರಂಜಿ ಆರದವಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿತ್ತು.ಆದರೆ ಶಾಲೆಯ ಶಿಕ್ಷಕರು ಆಕಸ್ಮಿಕವಾಗಿ ಮೃತರಾದ ಹಿನ್ನೆಲೆ ಪ್ರತಿಭಾ ಕಾರಂಜಿ ರದ್ದುಗೊಳಿಸಲಾಗಿತ್ತು ಎಂದರು.
ಅದರoತೆ ಶಿಕ್ಷಣ ಇಲಾಖೆಯ ಲಾಟರಿ ಮುಖಾಂತರ ಪ್ರತಿಭಾ ಕಾರಂಜಿಯನ್ನು ಆರದವಳ್ಳಿಯಲ್ಲಿ ನಡೆಸಲು ತೀರ್ಮಾನಿಸಿದ್ದು ಇದೀಗ ಕಾರಂಜಿ ಕಾರ್ಯಕ್ರಮವನ್ನು ಆರದವಳ್ಳಿ ಗ್ರಾಮದಿಂದ ಬೇರೆಡೆ ಆಚರಿಸಲು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.
ಪ್ರಸ್ತುತ ಆರದವಳ್ಳಿ ಸರ್ಕಾರಿ ಶಾಲೆಯಲ್ಲಿ ದಲಿತ ಕುಟುಂಬದ ಮಕ್ಕಳು ಅಭ್ಯಾಸಿಸುತ್ತಿರುವ ಹಿನ್ನೆಲೆ ಕಾರಂಜಿ ಕಾರ್ಯಕ್ರಮ ಬೇರೆಡೆ ಸ್ಥಳಾಂತರಿಸಲಾಗಿದೆ ಎಂಬ ಅನುಮಾನ ಮೂಡುತ್ತಿದೆ. ಹೀಗಾಗಿ ಶಾಲೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಶಿಕ್ಷಕರನ್ನು ವಾಪಸ್ ಆರದವಳ್ಳಿ ಶಾಲೆಗೆ ನಿಯೋಜಿಸಿ ಗ್ರಾಮ ದಲ್ಲೇ ಕಾರಂಜಿ ಆಚರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಮಹಿಳಾ ಸಂಘಟನಾ ಸಂಚಾಲಕಿ ಶಿಲ್ಪ ರಮೇಶ್, ವಿಭಾಗೀ ಯ ಸಂಚಾಲಕ ಟಿ.ಎಲ್.ಗಣೇಶ್, ಆರದವಳ್ಳಿ ಶಾಲೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಮೇಘನಾ, ಮುಖಂ ಡರಾದ ರಜನಿಕಾಂತ್ ಹಾಜರಿದ್ದರು.
——ಸುರೇಶ್