ಚಿಕ್ಕಮಗಳೂರು-ದೇಶ ಕಾಯುವ ಯೋಧರ ಆರೋಗ್ಯಕ್ಕಾಗಿ ವಂದೇ ಮಾತರಂ ಟ್ರಸ್ಟ್ ವತಿಯಿಂದ ರಾಷ್ಟ್ರರಕ್ಷಾ ಯಾಗ

ಚಿಕ್ಕಮಗಳೂರು-ವೇದಾಂತ ಸಾರಥಿ ಶ್ರೀ ಸ್ವಾಮಿ ವಿವೇಕಾನಂದರ 162ನೇ ಜನ್ಮದಿನದ ಪ್ರಯುಕ್ತ ಕೋಟೆ ಕೊಲ್ಲಾಪುರದಮ್ಮ ದೇವಾಲಯ ಆವರಣದಲ್ಲಿ ವಂದೇ ಮಾತರಂ ಟ್ರಸ್ಟ್ ವತಿಯಿಂದ ಭಾನುವಾರ ಸಂಜೆ ದೇಶ ಕಾಯುವ ಯೋಧರಿಗೆ ಆರೋಗ್ಯ, ಶಕ್ತಿ ಲಭಿಸಲಿ ಎಂದು ರಾಷ್ಟ್ರರಕ್ಷಾ ಯಾಗ, ದುರ್ಗಾಹೋಮ ಮತ್ತು ಹನುಮಯಾಗ ಕೈಗೊಳ್ಳಲಾಗಿತ್ತು.

ಸಂಜೆ 5.30ಕ್ಕೆ ಆರಂಭಗೊoಡ ಹೋಮ, ಯಾಗದಲ್ಲಿ ದೇಶಾಭಿಮಾನಿಗಳು, ಸ್ಥಳೀಯ ನಿವಾಸಿಗಳು ಕುಟುಂಬ ಸಮೇತರಾಗಿ ಆಗಮಿಸಿ ಸೈನಿಕರಿಗೆ ಗೌರವ ಸೂಚಿಸಿದರು.

ಯಾಗದ ಪೂರ್ಣಾಹುತಿ ಬಳಿಕ ಟ್ರಸ್ಟ್ ಕುಟುಂಬ ಹಾಗೂ ನಿವಾಸಿಗಳು ಹೋಮಕುಂಡಕ್ಕೆ ಪ್ರದರ್ಶಣೆ ಹಾಕಿದರು. ನಂತರ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಗುರು ಎಂಬುವವರ ಪಾಲಕರಿಗೆ ಟ್ರಸ್ಟ್ ನ ವತಿಯಿಂದ ಆತ್ಮೀಯವಾಗಿ ಗೌರವಿಸಿ, ವಿವೇಕರ ಜನ್ಮದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದರು.

ಬಳಿಕ ಚಿಕ್ಕಮಗಳೂರು-ಚಿಕಾಗೋ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್, ವಿಶ್ವ ವಿಖ್ಯಾತ ವಿವೇಕಾನಂದರಿಗೆ ಹಾಗೂ ಚಿಕ್ಕಮಗಳೂರಿಗೂ ಅವಿನಾಭವ ಸಂಬoಧವಿದೆ. ವಿಶ್ವ ಸರ್ವಧರ್ಮ ಸಮ್ಮೇಳನಕ್ಕೆ ಕಳಿಸಿಕೊಟ್ಟ ಕೀರ್ತಿ ಅಳಿಸಿಂಗ್‌ಪೆರುಮಾಳ್‌ರು ಎಂದ ಅವರು ಇಲ್ಲಿನ ದತ್ತಾತ್ರೇಯ ವರಪ್ರಸಾದವಾಗಿ ಜನಿಸಿದ ಪೆರುಮಾಳ್, ಈ ಮಣ್ಣಿನ ನೆಲದಲ್ಲಿ ಬದುಕು ಆರಂಭಿಸಿದ್ದನ್ನು ಸ್ಮರಿಸಿದರು.

ಕಾಲಕ್ರಮೇಣ ಅಳಸಿಂಗ್‌ಪೆರುಮಾಳ್ ಕುಟುಂಬವು ಮದ್ರಾಸ್‌ನಲ್ಲಿ ನೆಲೆಕಂಡಿತು. ಈ ನಡುವೆ ಇಡೀ ಭಾರತಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದ ಸ್ವಾಮಿ ವಿವೇಕಾನಂದರು ಒಂದೊಮ್ಮೆ ದಕ್ಷಿಣ ಭಾರತದ ಮದ್ರಾಸ್ ಪ್ರಾಂತ್ಯದಲ್ಲಿ ಪ್ರವಾಸ ಕೈಗೊಂಡು ರಾಷ್ಟ್ರ ಚಿಂತನೆ ಬೋಧಿಸಿದ್ದರು. ಇದನ್ನರಿತು ಪೆರುಮಾಳ್ ವಿವೇಕರನ್ನು ಭೇಟಿ ಮಾಡಿ ವಿಶ್ವಧರ್ಮಸ್ಥಳಕ್ಕೆ ಕಳುಹಿಸಲು ತಿಂಗಳುಗಟ್ಟಲೇ ಕಾದು ಒಪ್ಪಿಸಿದ್ದರು.

ಇದಾದ ಬಳಿಕ ವಿದೇಶದಲ್ಲಿ ನಡೆಯುವ ಸಮ್ಮೇಳನಕ್ಕೆ ಟಿಕೇಟ್‌ಗಾಗಿ ಅಳಸಿಂಗ್‌ರವರು ಮನೆ ಮನೆಗಳಲ್ಲಿ ಭಿಕ್ಷಾಟನೆ ನಡೆಸಿ ಸಾಕಷ್ಟು ಹಣವನ್ನು ಸಂಗ್ರಹಿಸಿ ಕೊನೆಗೆ ಟಿಕೇಟ್ ಖರೀದಿಸಿ ಸಮ್ಮೇಳನಕ್ಕೆ ಕಳಿಸಿದರು.ನಂತರ ವಿವೇಕಾನಂದರು ಪ್ರಥಮ ಬಾರಿಗೆ 45ಕ್ಕೂ ಹೆಚ್ಚು ಪತ್ರಗಳನ್ನು ಬರೆದ ವ್ಯಕ್ತಿ ಅಳಸಿಂಗ್‌ರು ಎಂಬುದು ಇತಿಹಾಸವಾಗಿದೆ ಎಂದರು.

ಹಲವಾರು ತೊಡಕುಗಳ ನಡುವೆ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಭಾರತೀಯ ನೆಲದ ಪರಂಪರೆಯನ್ನು ದಿಕ್ಸೂಚಿ ಭಾಷಣ ನೀಡಿ ಸಭಿಕರನ್ನು ಸೆರೆಹಿಡಿದರು. ಈ ಭಾಷಣವು ಯುವಸಮೂಹಕ್ಕೆ ಸ್ಪೂರ್ತಿಯಾಯಿತು ಎಂದು ಹೇಳಿದರು.

ವಿದೇಶದಲ್ಲಿ ವಿವೇಕಾನಂದರಿಗೆ ಆರ್ಥಿಕ ಸಂಕಷ್ಟದ ವೇಳೆ ಪೆರುಮಾಳ್‌ರು ಮತ್ತೆ ಭಿಕ್ಷಾಟನೆ ನಡೆಸಿ, ಪತ್ನಿ ಆಭರಣಗಳನ್ನು ಅಡವಿಟ್ಟು ಹಣ ಸಂಗ್ರಹಿಸಿ ವೀರ ಸನ್ಯಾಸಿಗೆ ಕಳಿಸಿಕೊಟ್ಟ ಪರಿಣಾಮ ಅವರ ಕೀರ್ತಿ ಎಲ್ಲೆಡೆ ಹಬ್ಬಿದೆ. ಸಮ್ಮೇಳನಕ್ಕೆ ತೆರಳುವ ಮುನ್ನ ಪೆರುಮಾಳ್ ಒಬ್ಬರೇ ಜೊತೆಗಿದ್ದರು. ವಾಪಸಾದ ಬಳಿಕ ಇಡೀ ಭಾರತವೇ ವಿವೇಕಾನಂದರ ಸಾಧನೆ ಗುರುತಿಸಿ ತಾಯ್ನಡಿಗೆ ಸ್ವಾಗತಿಸಿತ್ತು ಎಂದರು.

ವoದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್ ಮಾತನಾಡಿ 2011ರ ಇಸವಿಯಲ್ಲಿ ಪುಲ್ವಾಮಾ ದಾಳಿಯಲ್ಲಿ ಸುಮಾರು 75 ಮಂದಿ ಸೈನಿಕರು ಸಂಚರಿಸುವ ವೇಳೆ ಸುಸೈಡ್ ಬಾಂಬ್ ಹಾಕಿ ನಮ್ಮ 40 ಸೈನಿಕರು ಹುತಾತ್ಮರಾದರು.35 ಸೈನಿಕರಿಗೆ ತೀವ್ರ ಸ್ವರೂಪದ ಗಾಯಗಳಾದವು.ಮಂಡ್ಯ ಜಿಲ್ಲೆಯ ಯೋಧ ಗುರು ಸೇರಿದಂತೆ ಅನೇಕರ ಮೃತ್ಯು ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ತಿಳಿಸಿದರು.

ವಿವೇಕಾನoದರ ಜನ್ಮದಿನದ ಪ್ರಯುಕ್ತ ಪ್ರತಿವರ್ಷವು ನಿವೃತ್ತ ಯೋಧರು ಅಥವಾ ದೇಶಕ್ಕೆ ಮಡಿದವರಿಗೆ ಗೌರವಿಸಿ ರಾಷ್ಟ್ರ ಸೇವೆಯಲ್ಲಿ ಟ್ರಸ್ಟ್ ತೊಡಗಿಸಿಕೊಂಡಿದೆ. ಮಕ್ಕಳನ್ನು ಕಳೆದುಕೊಂಡ ನೋವು ಪಾಲಕರಿಗಿದೆ, ಆದರೆ ದೇಶಕ್ಕೆ ಕರುಳಕುಡಿಯನ್ನೇ ಅರ್ಪಿಸುವ ನಿಜವಾದ ಧೈರ್ಯ ಎಲ್ಲರಲ್ಲೂ ಇರುವುದಿಲ್ಲ ಎಂದರು.

ಮೃತ ಸೈನಿಕ ಗುರುವಿನ ಪೋಷಕರು ಮಾತನಾಡಿ, ಕುಟುಂಬದಲ್ಲಿ ಸೈನ್ಯಕ್ಕೆ ಕಳಿಸುವುದು ಇಷ್ಟವಿರಲಿಲ್ಲ. ಮಗನ ದೇಶಭಕ್ತಿ ಕಂಡು ಮಾತೃವಿನ ಒಲ್ಲದ ಮನಸ್ಸಿನಲ್ಲೂ ದೇಶಸೇವೆಗೆ ಕಳಿಸಿದೆವು. ಪುಲ್ವಾಮಾ ದಾಳಿಗೂ ಮುನ್ನ ಕೆಲ ನಿಮಿಷ ಮಾತನಾಡಿದ್ದೇವು. ಸದ್ಯದಲ್ಲೇ ಊರಿಗೆ ಬರುವೆನು ಎಂದಿದ್ದ ಮಗ, ಮಧ್ಯಾಹ್ನ ಸಾವಪ್ಪಿದ್ದು ಬಹಳಷ್ಟು ಸಂಕಟ ತಂದಿತ್ತೆoದು ಅಳಲು ತೋಡಿಕೊಂಡರು.

ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯ ಭಜನಾ ಮಂಡಳಿ ಸಂಚಾಲಕ ಉದಯಸಿಂಹ, ಕಾಮಧೇನು ಗೋ ಶಾಲೆಯ ಭಗವಾನ್‌ರಾಮ್, ಸಂಜಿತ್ ಸುವರ್ಣ, ನಿವೃತ್ತ ಯೋಧ ಪ್ರದೀಪ್, ವಂದೇ ಮಾತರಂ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.

——-—-ಸುರೇಶ್

Leave a Reply

Your email address will not be published. Required fields are marked *

× How can I help you?