ಚಿಕ್ಕಮಗಳೂರು-ರೋಟರಿ ಕಾಫಿಲ್ಯಾಂಡ್ ವತಿಯಿಂದ ವಿದ್ಯಾರ್ಥಿಗಳಿಗೆ ಸಾಮಾಜಿಕ ಅರಿವು ಕಾರ್ಯಕ್ರಮ

ಚಿಕ್ಕಮಗಳೂರು-ಶರೀರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಕಾಳಜಿ ಜೊತೆಗೆ ಆರೋಗ್ಯ ನಿರ್ವಹಣೆಯಲ್ಲಿ ಬಹಳ ಜಾಗ್ರತೆ ವಹಿಸಬೇಕು.ನಿರ್ಲಕ್ಷ್ಯ ವಹಿಸಿದರೆ ಹಲವಾರು ಕಾಯಿಲೆಗಳು ಆವರಿಸಿಕೊಳ್ಳಲಿದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ|| ಮೋಹನ್‌ಕುಮಾರ್ ಹೇಳಿದರು.

ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ರೋಟರಿ ಕಾಫಿಲ್ಯಾಂಡ್ ವತಿಯಿಂದ ಡಿಗ್ರಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ಧ ಸಾಮಾಜಿಕ ಅರಿವು ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಚರ್ಮವೂ ದೇಹದಲ್ಲಿನ ಕೊಳೆಯನ್ನ ಬೆವರಿನ ಮುಖಾಂತರ ಹೊರಹಾಕುತ್ತದೆ. ದೊಷಯುಕ್ತ ಚರ್ಮದಲ್ಲಿ ಬೆವರಿನ ಗ್ರಂಥಿಗಳು ಮುಚ್ಚಿದಾಗ ಗಾಯಗಳು, ಕೀವುಗುಳ್ಳೆಗಳು ಹಾಗೂ ಮೊಡವೆಗಳು ಉಂಟಾಗುತ್ತವೆ ಹೀಗಾಗಿ ಚರ್ಮವನ್ನು ಶುಚಿಯಾಗಿಡಲು ಪ್ರತಿನಿತ್ಯ ಸ್ವಚ್ಛ ನೀರಿನಿಂದ ಸ್ನಾನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಥಮಿಕ ಹಂತದಿoದಲೇ ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಅಗತ್ಯವಿದ್ದು,ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರು ಕಾಳಜಿ ವಹಿಸುವುದು ಅತ್ಯವಶ್ಯಕವಾಗಿದೆ.ಆರೋಗ್ಯದ ವಿಚಾರದಲ್ಲಿ ಸಣ್ಣಪುಟ್ಟ ವಿಷಯ ಗಳ ಮಹತ್ವ ತಿಳಿಸಬೇಕು. ಆಲಸ್ಯತನ ವಹಿಸಿದರೆ ರೋಗಗಳು ನಮ್ಮನ್ನು ಹೈರಾಣಾಗಿಸಿ ಬಿಡುತ್ತವೆ ಎಂದು ಹೇಳಿದರು.

ಟ್ರಾಫಿಕ್ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಬಿ.ಸಿ.ಧನಂಜಯ್ ಮಾತನಾಡಿ, ಪ್ರತಿಯೊಬ್ಬ ವಾಹನ ಸವಾರರು ಕಡ್ಡಾಯವಾಗಿ ಕಾನೂನು ನಿಯಮ ಪಾಲಿಸುವುದರೊಂದಿಗೆ, ವಾಹನದ ಸುರಕ್ಷತಾ ಕ್ರಮವನ್ನು ಅನುಸರಿಸುವುದರಿಂದ ಹಲವಾರು ಅಪಾಯಗಳಿಂದ ರಕ್ಷಣೆ ಪಡೆಯಬಹುದಾಗಿದೆ ಎಂದು ಹೇಳಿದರು.

ದ್ವಿಚಕ್ರ ವಾಹನ ಸವಾರರು ಪರವಾನಗಿ ಪಡೆದು ವಾಹನಗಳನ್ನು ಚಲಾಯಿಸಬೇಕು.ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.ವಾಹನಗಳ ವಿಮೆ,ಪರವಾನಗಿ,ಎಫ್‌ಸಿ ಸೇರಿದಂತೆ ನಿಯಮಾನುಸಾರ ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ವಾಹನ ಚಾಲಕರು ಮಾಡಬೇಕು ಎಂದರು.

ಕೃಷಿ ಇಲಾಖೆ ಅಧಿಕಾರಿ ವೆಂಕಟೇಶ್ ಎಸ್.ಚೌಹಾಣ್ ಮಾತನಾಡಿ, ಸ್ವಚ್ಚಂಧ ಪರಿಸರ ಹಾಗೂ ಉತ್ತಮ ಗಾಳಿಗಾಗಿ ಅಕ್ಕಪಕ್ಕದ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸಬೇಕು.ಅಲ್ಲದೇ ಅಗತ್ಯಕ್ಕಿಂತ ಹೆಚ್ಚು ನೀರನ್ನು ವ್ಯರ್ಥಗೊಳಿಸದೇ ಬೇಕಾದಷ್ಟು ಮಾತ್ರ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ಪಿ.ತನೋಜ್‌ಕುಮಾರ್ ವಹಿಸಿದ್ದರು.ವೇದಿಕೆಯಲ್ಲಿ ರೋಟರಿ ಸಹಾಯಕ ಗೌರ್ವರ್ ನಾಸೀರ್ ಹುಸೈನ್,ಎಂ.ಇ.ಎಸ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲೆ ಹಸೀನಾ ಭಾನು, ಐ.ಡಿ.ಎಸ್‌.ಜಿ ಕಾಲೇಜು ಉಪನ್ಯಾಸಕ ಎಂ.ಹೆಚ್.ಜಗದೀಶ್, ರೋಟರಿ ಕಾರ್ಯದರ್ಶಿ ನಾಗೇಶ್ ಕೆಂಜಿಗೆ, ಸಹ ಕಾರ್ಯದರ್ಶಿ ಆನಂದ್, ಸದಸ್ಯರುಗಳಾದ ಗುರುಮೂರ್ತಿ, ರುದ್ರೇ ಶ್, ರವಿಂದ್ರ ನಾಯ್ಡ, ಸುರೇಶ್, ವಿವೇಕ್, ಗುರುಪ್ರಸಾದ್, ಶಾಂತರಾಮಶೆಟ್ಟಿ, ಸೂರಜ್ ಮತ್ತಿತರರಿದ್ದರು.

————ಸುರೇಶ್

Leave a Reply

Your email address will not be published. Required fields are marked *

× How can I help you?