ಚಿಕ್ಕಮಗಳೂರು-ರಾಜಕಾರಣಿ ದುರೀಣ ಹಾಗೂ ಉದ್ಯಮಶೀಲ ಮುಖ್ಯಮಂತ್ರಿ ಎಂ.ಎಸ್.ಕೃಷ್ಣ ವಯೋಸಹಜ ನಿಧನರಾದ ಹಿನ್ನೆಲೆ ಮಂಗಳವಾರ ಸಂಜೆ ಜಿಲ್ಲಾ ಮದ್ಯ ವರ್ತಕರ ಸಂಘದಿಂದ ನಗರದ ಹನುಮಂತಪ್ಪ ವೃತ್ತದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಿದರು.
ಸಂಘದ ಅಧ್ಯಕ್ಷ ಬಿ.ರಾಜಪ್ಪ ಮಾತನಾಡಿ, ನಾಡಿನ ಅಭಿವೃಧ್ದಿ ಹರಿಕಾರರಾಗಿ ದುಡಿದಿರುವ ಎಂ.ಎಸ್. ಕೃಷ್ಣ ಅವರು ರಾಜಧಾನಿ ಬೆಂಗಳೂರನ್ನು ಸಿಲಿಕಾನ್ ಸಿಟಿಯನ್ನಾಗಿಸಲು ಶ್ರಮಪಟ್ಟಿದ್ದಾರೆ. ಐಟಿ, ಬಿಟಿಯಲ್ಲಿ ಬಹುದೊಡ್ಡ ಕ್ರಾಂತಿ ಸೃಷ್ಟಿಸಿ ಯುವತಿಯರಿಗೂ ಉದ್ಯೋಗಾವಕಾಶ ಕಲ್ಪಿಸಿದ್ದರು ಎಂದು ತಿಳಿಸಿದರು.
ಸಾವಿರಾರು ಕೋಟಿ ತೆರಿಗೆಯನ್ನು ಸರ್ಕಾರಕ್ಕೆ ವಂಚಿಸಿ ಎರಡನೇ ದರ್ಜೆ ಮಧ್ಯವನ್ನು ಮಾರುತ್ತಿದ್ದ ಸಂದರ್ಭದಲ್ಲಿ ಕೃಷ್ಣರವರು ಗೌರವಿತವಾಗಿ ಸರ್ಕಾರಕ್ಕೆ ಸಲ್ಲುವ ತೆರಿಗೆಗಳನ್ನು ಪಾವತಿಸಿ ಗೌರವ ಜೀವನ ನಡೆಸಿ ಎಂದು ತೆರಿಗೆರಹಿತ ಮಧ್ಯವನ್ನು ನಿಲ್ಲಿಸಿದ್ದರು ಎಂದರು.
ಶೇ.20ರಷ್ಟು ಲಾಭದೊಂದಿಗೆ ತೆರಿಗೆಯುಕ್ತ ಮಧ್ಯವನ್ನು ಮಾರುವುದರ ಮೂಲಕ ಕೇವಲ ವರ್ಷಕ್ಕೆ ನಾಲ್ಕು ಸಾವಿರ ಕೋಟಿ ರೂ ಆದಾಯವನ್ನು ಸುಮಾರು 32 ಸಾವಿರ ಕೋಟಿ ರೂ.ಗಳು ಬರುವಂತೆ ಮಾಡಿರುವ ಕೀರ್ತಿ ಹಾಗೂ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಮದ್ಯ ಮಾರಾಟಗಾರರಿಗೆ ಸ್ವಾಭಿಮಾನದಿಂದ ಜೀವನ ಮಾಡುವುದನ್ನು ಕಲಿಸಿಕೊಟ್ಟವರು ಹಾಗೂ ಬೆಂಗಳೂರನ್ನು ಐಟಿಬಿಟಿ ಕಂಪನಿಯಾಗಿ ಪರಿವರ್ತಿಸಿ ರಾಜ್ಯದ ಲಕ್ಷಾಂತರ ಯುವಕರಿಗೆ ಉದ್ಯೋಗವನ್ನು ನೀಡಿದ್ದಲ್ಲದೆ ಜಿಲ್ಲೆಯ ಯುವಕರಿಗೂ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಇತಿಹಾಸದಲ್ಲಿ ಪುಟದಲ್ಲಿ ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಾಣಗೊಳಿಸಿದರೆ, ಆಧುನಿಕ ಯುಗದಲ್ಲಿ ಎಂ.ಎo.ಕೃಷ್ಣರವರು ಬೆಂಗಳೂರು ನಗರವನ್ನು ಆಧುನಿಕ ನಗರನ್ನಾಗಿ ನಿರ್ಮಿಸುವ ಮೂಲಕ ಅಭಿವೃದ್ದಿ ಪಥದತ್ತ ಕೊಂಡೊಯ್ದರು ಎಂದರು.
ಈ ಸಂದರ್ಭದಲ್ಲಿ ಮದ್ಯ ವರ್ತಕರ ಸಂಘದ ಸದಸ್ಯರಾದ ಸಿ.ಎಂ.ಸಿದ್ದು, ವಿನಯ್, ನಾಸೀರ್, ಕ್ಲಾಸನ್ ಪಿಂಟೋ, ಓಂಕಾರೇಗೌಡ, ಯೋಗೀಶ್, ಜಗದಿಶ್, ರಾಜ್‌ಕುಮಾರ್ ಮತ್ತಿತರರಿದ್ದರು.