ಚಿಕ್ಕಮಗಳೂರು-ಸಮಾನ ಪತ್ತಿನ ಸೌಹಾರ್ದ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ದೇವರಾಜ್, ಉಪಾಧ್ಯಕ್ಷರಾಗಿ ಕೃಷ್ಣಮೂರ್ತಿ ಆಯ್ಕೆ

ಚಿಕ್ಕಮಗಳೂರು-ಸಮಾನ ಪತ್ತಿನ ಸೌಹಾರ್ದ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಬಿ.ದೇವರಾಜ್ ಹಾಗೂ ಉಪಾಧ್ಯಕ್ಷರಾಗಿ ಡಿ.ಪಿ.ಕೃಷ್ಣಮೂರ್ತಿ ಶುಕ್ರವಾರ ಅವಿರೋಧ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ದೇವರಾಜ್ ಹಾಗೂ ಕೃಷ್ಣಮೂರ್ತಿ ಹೊರತಾಗಿ ಬೇರ್ಯಾವ ಉಮೇದುವಾರಿಕೆ ಸಲ್ಲಿಕೆಯಾಗದ ಹಿನ್ನೆಲೆ ಚುನಾವಣಾಧಿಕಾರಿ ಪಿ.ರವಿಕುಮಾರ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಇದೇ ವೇಳೆ ಆಡಳಿತ ನಿರ್ದೇಶಕರುಗಳಾಗಿ ಕೆ.ಎನ್.ದೊಡ್ಡೇಗೌಡ, ಹೆಚ್.ಡಿ.ತಮ್ಮಯ್ಯ, ಬಿ.ಜಿ.ಸೋಮ ಶೇಖರಪ್ಪ, ಬಿ.ಎ.ಬಾಲಕೃಷ್ಣ, ಎಂ.ಎ.ರವಿಕುಮಾರ್, ಯು. ಎಂ. ಜಯ ರಾಮೇ ಗೌಡ,ಗಂಗಾಧರನಾಯ್ಕ್, ಟಿ.ಎಂ.ದೇವಿಕಾ, ಕೆ.ವಿ.ಮಮತಾ ಆಯ್ಕೆಯಾದರು.

ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಬಿ.ವೈ.ವೆಂಕಟೇಶ್, ಪ್ರವರ್ತಕರಾದ ಕೆ.ಜಿ. ನೀಲಕಂಠಪ್ಪ, ಹೆಚ್.ಎಂ.ನೀಲಕoಠಪ್ಪ, ಕೆ.ರಾಘವೇಂದ್ರ, ಜಿ.ಎಸ್.ಷಡಕ್ಷರಿಸ್ವಾಮಿ ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?