
ಚಿಕ್ಕಮಗಳೂರು-71ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಜಿಲ್ಲೆಯ ಸಮಾನ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಂಗವಾಗಿ ಜಿಲ್ಲಾ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ ಗರಿಯನ್ನು ಇತ್ತೀಚೆಗೆ ನಗರದ ಒಕ್ಕಲಿಗರ ಭವನದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾನ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೇವರಾಜ್, ಸಿಇಓ ವೆಂಕಟೇಶ್, ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕಿನ ಉಪಾಧ್ಯಕ್ಷ ಉಳವಪ್ಪ ತಿಪ್ಪಣ್ಣ ದಾಸನೂರು, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಈಶ್ವರಹಳ್ಳಿ ಮಹೇಶ್, ಸಹಕಾರ ಯೂನಿಯನ್‌ನ ಇಂದ್ರೇಶ್ ಮತ್ತಿತರರು ಹಾಜರಿದ್ದರು.