ಚಿಕ್ಕಮಗಳೂರು-ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ನಗರದ ಜಿ.ಪಂ. ಆವರಣದಲ್ಲಿರುವ ಡಾ,ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ದಸಂಸ ಮುಖಂಡರುಗಳು ಮಾಲಾರ್ಪಣೆ ಮಾಡಿ ಸಮರ್ಪಣಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್, ಮಹಿಳಾ ಸಂಘಟನೆ ಸಂಚಾಲಕಿ ಶಿಲ್ಪ ರಮೇಶ್, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ, ಮುಖಂಡರುಗಳಾದ ಗಂಗಾಧರ್, ಗಣೇಶ್, ಪ್ರದೀಪ್, ಲಕ್ಷ್ಮಣ, ಸಂತೋ ಷ್, ಹರೀಶ್ ಮಿತ್ರ ಮತ್ತಿರರರು ಹಾಜರಿದ್ದರು.