ಚಿಕ್ಕಮಗಳೂರು-ಸಂಘಟನೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಜಿಲ್ಲಾಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಲಿಂಗದಹಳ್ಳಿ ಯೋಗೀಶ್ ಹೇಳಿದರು.
ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ನೂತನ ಸಂಘ ಅಸ್ಥಿತ್ವಕ್ಕೆ ಹಾಗೂ ಸಭೆಯನ್ನು ತರೀಕೆರೆ ಪಟ್ಟಣದಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಪರಿಕರಗಳಿಗೆ ಸಂಬOಧಿಸಿದOತೆ ಕಡ್ಡಾಯವಾಗಿ ರಶೀದಿ ನೀಡಬೇಕು. ಬೀಜ, ಗೊಬ್ಬರದ ಕುರಿತು ಅಗತ್ಯ ಮಾಹಿತಿ ಪಡೆಯಬೇಕು. ರೈತರಿಗೆ ಯಾವುದೇ ಗೊಂದಲ ಆಗದಂತೆ ಕಾಳಜಿ ವಹಿಸುಂತೆ ಕರೆಕೊಟ್ಟರು.
ನೂತನತರೀಕೆರೆ-ಅಜ್ಜಂಪುರ ತಾಲ್ಲೂಕು ಅಧ್ಯಕ್ಷರಾಗಿ ಬಿಲಾಲ್ ಶರ್ಮದ್, ಪ್ರಧಾನ ಕಾರ್ಯದರ್ಶಿ ಜಾವೀದ್, ಖಜಾಂಚಿ ಆರ್.ಅಶೋಕ್, ಗೌರವ ಅಧ್ಯಕ್ಷ ಪುರುಷೋತ್ತಮ್ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷ ಟಿ.ಡಿ.ತಿಮ್ಮಯ್ಯ, ಖಜಾಂಚಿ ಶ್ರೀಕಾಂತ್ ಶೆಟ್ಟಿ ನಿರ್ದೇಶಕ ವಿಕ್ರಂರಾಮಕುಮಾರ್ ಮತ್ತಿತರರು ಹಾಜರಿದ್ದರು.