ಚಿಕ್ಕಮಗಳೂರು-ಶಂಕರ ವಿದ್ಯಾಮಂದಿರ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಸಾಮಾಜಿಕ ಸೇವೆ ಸಲ್ಲಿಸುತ್ತಿದೆ-ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

ಚಿಕ್ಕಮಗಳೂರು-ಮಕ್ಕಳ ಶೈಕ್ಷಣಿಕ ಬೆಳವಣಿಗೆ ದೃಷ್ಟಿಯಿಂದ ಉತ್ತಮ ಪಠ್ಯ,ಕ್ರೀಡಾಸಕ್ತಿ ಹಾಗೂ ಸಾಂಸ್ಕೃತಿಕ ಚಟುವಟಿಕೆ ರೂಪಿಸಲು ಸಕಲ ಸೌಲಭ್ಯಗಳನ್ನು ಪೂರಕವಾಗಿ ವಿದ್ಯಾಸಂಸ್ಥೆ ಒದಗಿಸುತ್ತಿದೆ ಎಂದು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಶ್ರೀ ಗುರು ಶಂಕರ ಸ್ವಾಮಿ ಸೇವಾ ಪ್ರತಿಷ್ಟಾನದ ಶಂಕರ ವಿದ್ಯಾ ಮಂದಿರದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವು ದುಬಾರಿಯಾಗುತ್ತಿದೆ.ಲಕ್ಷಗಟ್ಟಲೇ ಹಣವನ್ನು ಮಕ್ಕಳ ಭವಿಷ್ಯಕ್ಕೆ ವ್ಯಯಿಸುತ್ತಿದೆ.ಆದರೆ ಶಂಕರ ವಿದ್ಯಾಮಂದಿರ ಎಲ್ಲದಕ್ಕಿಂತ ಭಿನ್ನವಾಗಿ ಪಾಲಕರು ಹಾಗೂ ಮಕ್ಕಳ ಹಿತದೃಷ್ಟಿಯಿಂದ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಸಾಮಾಜಿಕ ಸೇವೆ ಸಲ್ಲಿಸುತ್ತಿದೆ ಎಂದರು.

ಕೆಲವೊoದು ಖಾಸಗೀ ಶಾಲೆಗಳು ಶೇ.100 ಅಂಕಗಳಿಸುವ ದೃಷ್ಟಿಯಿಂದ ವಿದ್ಯಾರ್ಜನೆಯಿಂದ ಹಿಂದುಳಿದ ಮಕ್ಕಳನ್ನು ಸುಖಸುಮ್ಮನೆ ಪಾಲಕರ ಮನಸ್ಸು ಕೆಡಿಸಿ ಬೇರೆಡೆ ವರ್ಗಾಯಿಸುತ್ತಿವೆ.ಆ ನಿಟ್ಟಿನಲ್ಲಿ ಶಂಕರ ಸಂಸ್ಥೆ ಓದಿನಲ್ಲಿ ಹಿಂದುಳಿದ ಮಕ್ಕಳನ್ನು ಕೂಡಾ ಚಾಣಕ್ಯರಾಗಿಸಿ ಸಮಾಜಕ್ಕೆ ಮಾದರಿಯಾಗುತ್ತಿದೆ ಎಂದರು.

ಪ್ರಸ್ತುತ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಯಲ್ಲಿ ಶೇ.85ರಷ್ಟು ಅಂಕಗಳಿಸಿದರೆ ಮಾತ್ರ ಕೆಲವು ಖಾಸಗೀ ಶಾಲೆಗಳು ಸೀಟ್‌ನ್ನು ನೀಡುತ್ತಿವೆ. ಅಂಕ ಹೊರತಾಗಿ ಮಕ್ಕಳ ವ್ಯಾಸಂಗದ ಚುರುಕಿಗೆ ಶಾಲೆಗಳು ಮುಂದಾಗಬೇಕು.ಇದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನಗಳಿಸಿಕೊಂಡಾಗ ಓದಿದ ಶಾಲೆಗೆ ನಿಜವಾದ ಫಲಿತಾಂಶ ಲಭಿಸಿದಂತೆ ಎಂದು ಹೇಳಿದರು.

ಹಿರಿಯ ವಕೀಲೆ ಮಮತಾ ಮಾತನಾಡಿ ಬಾಲ್ಯದಿಂದಲೇ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಒದಗಿಸಿದರೆ ಸಾಲದು,ಹಿರಿಯರ ಗೌರವಿಸುವ,ಪರಸ್ಪರ ಸಂಬoಧ ಬೆಸೆಯುವ ಹಾಗೂ ನಾಡಿನ ಸಂಸ್ಕೃತಿ ಸಂಪ್ರದಾಯ ಪರಿಚಯಿಸಬೇಕು.ಹೆಚ್ಚು ಮೊಬೈಲ್ ಬಳಕೆಯಿಂದ ಮಕ್ಕಳನ್ನು ದೂರವಿರಿಸಿ ಭಜನೆ, ಶೋಕ, ಉಪನಿಷತ್ತುಗಳನ್ನು ಬಿತ್ತುವ ಕಾರ್ಯವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗುರು ಶಂಕರಸ್ವಾಮಿ ಸೇವಾ ಪ್ರತಿಷ್ಟಾನದ ಟ್ರಸ್ಟಿ ಎಂ.ಡಿ.ಪುಟ್ಟೇಗೌಡ ವಹಿಸಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯ ಸಮಿತಿ ಸದಸ್ಯ ಎಂ.ಆರ್. ಪೂರ್ಣೇಶ್‌ಮೂರ್ತಿ, ಟ್ರಸ್ಟಿಗಳಾದ ಅಶೋಕ್‌ಕುಮಾರ್, ವನಜಕ್ಷಮ್ಮ, ಶಿಕ್ಷಕಿ ಗೀತಾ ಇದ್ದರು.ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

————-—-ಸುರೇಶ್

Leave a Reply

Your email address will not be published. Required fields are marked *

× How can I help you?