ಚಿಕ್ಕಮಗಳೂರು-ಎಸ್.ಟಿ.ಜೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ-ಎಸ್.ಆರ್ ಲೋಹಿತ್‌ರಿಗೆ “ಚಿನ್ಮಯ ಜ್ಞಾನಿ” ಶಿಕ್ಷಕ ಪ್ರಶಸ್ತಿ

ಚಿಕ್ಕಮಗಳೂರು-ಮೈಸೂರಿನ ಶರಣ ವಿಶ್ವವಚನ ಫೌಂಡೇಶನ್ ನ ಹತ್ತನೇ ವರ್ಷದ ವಾರ್ಷಿಕೋ ತ್ಸವದ ಪ್ರಯುಕ್ತ ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುವ ರಾಜ್ಯಮಟ್ಟದ ಚಿನ್ಮಯ ಜ್ಞಾನಿ ಪ್ರಶಸ್ತಿ ಚಿಕ್ಕಮಗ ಳೂರಿನ ಎಸ್.ಟಿ.ಜೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಸ್.ಆರ್ ಲೋಹಿತ್‌ರಿಗೆ ಲಭಿಸಿದೆ.

ಕ್ರಿಯಾಶೀಲರಾಗಿ, ಸಮಾಜಮುಖಿ ಚಿಂತನೆ ಒಳಗೊಂಡು ಶಿಕ್ಷಣ ಕ್ಷೇತ್ರದ ಜೊತೆಗೆ, ಚಿಕ್ಕಮಗಳೂರು ಜೆ.ಸಿ.ಐ ನ ಅಧ್ಯಕ್ಷರೂ ಆಗಿದ್ದ ಇವರು ಸಮಾಜ ಮುಖಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎಸ್. ಟಿ .ಜೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಸ್.ಆರ್ ಲೋಹಿತ್ ರವರ ಕಾರ್ಯಕ್ಷಮತೆಗೆ ಚಿನ್ಮಯ ಜ್ಞಾನಿ ಪ್ರಶಸ್ತಿ ಒಲಿದು ಬಂದಿದೆ.

ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಶರಣ ವಚನ ಫೌಂಡೇಶನ್ ಸಂಸ್ಥಾಪಕರಾದ ಡಾ. ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ ಲೋಹಿತ್ ಎಸ್ ಆರ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

ಎಸ್. ಟಿ. ಜೆ ಕಾಲೇಜಿನ ಪ್ರಾಂಶುಪಾಲರು ಸಿಬ್ಬಂದಿಗಳು ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಉಪನ್ಯಾಸಕರಿಗೆ ಪ್ರಶಸ್ತಿ ದೊರಕಿರುವದಕ್ಕೆ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?