ಚಿಕ್ಕಮಗಳೂರು-ದಸಂಸ ಚಳಿವಳಿಯಲ್ಲಿ ಸುಮಾರು ಐದು ದಶಕಗಳ ಕಾಲ ನಿರಂತರ ಸೇವೆ ಸಲ್ಲಿಸಿರುವ ಕಡೂರಿನ ಟಿ.ಮಂಜಪ್ಪ ಅವರನ್ನು ರಾಷ್ಟ್ರೀಯ ದಲಿತ ಸಾಹಿತ್ಯ ಅಕಾಡೆಮಿ ಗುರುತಿಸಿ ಇತ್ತೀಚೆಗೆ ದೆಹಲಿಯಲ್ಲಿ ಡಾ|| ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಮೂಲತಃ ಟಿ.ಮಂಜಪ್ಪರವರು 1974ರ ಇಸವಿಯಲ್ಲಿ ದಸಂಸ ಚಳುವಳಿಯಲ್ಲಿ ಭಾಗಿಯಾಗಿ ಅನೇಕ ಜನ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡು ನ್ಯಾಯಕ್ಕಾಗಿ ಶ್ರಮಿಸಿದ್ದರು. ಅಲ್ಲದೇ ಪ್ರಸ್ತುತ ದಸಂಸ (ಪ್ರೊ.ಬಿ.ಕೃಷ್ಣಪ್ಪ ಬಣ)ದ ರಾಜ್ಯ ವಿಭಾಗೀಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
———-ಸುರೇಶ್