ಚಿಕ್ಕಮಗಳೂರು-ತಾಲ್ಲೂಕಿನ ತೊಗರಿಹಂಕಲ್ ಗ್ರಾಮ ಪಂಚಾಯಿತಿ ನೂತನ ಅಧ್ಯ ಕ್ಷರಾಗಿ ಬಿಜೆಪಿ ಬೆಂಬಲಿತ ಸಾದೀಕ್ ಅವರು ಬುಧವಾರ ಚುನಾವಣಾ ಮುಖಾಂತರ ಆಯ್ಕೆಯಾದರು.
ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾದೀಕ್ ಮತ್ತು ನೀಲಾ ಮೋಹನ್ ಸ್ಫರ್ಧಿಸಿದ್ದರು. ಪಂಚಾಯಿತಿ ಒಟ್ಟು 13 ಸದಸ್ಯರ ಪೈಕಿ ಸಾದಿಕ್ ಪರವಾಗಿ 10 ಹಾಗೂ ನೀಲಾ ಪರವಾಗಿ 3 ಮತಗಳು ಚಲಾವಣೆಯಾದ ಹಿನ್ನೆಲೆ ಚುನಾವಣಾಧಿಕಾರಿ ಹೆಚ್.ಸಿ.ರವೀಶ್ ಸಾದೀಕ್ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಕೆ.ಆರ್.ಅನಿಲ್‌ಕುಮಾರ್, ಅಮಾವಾಸ್ಯೆ, ಆಶ್ರಫ್, ಗೋಪಾಲ್, ಸಂತೋಷ್ ಪೂಜಾರಿ, ಸೋಮಶೇಖರ್, ಜಯರಾಮ್, ಲೋಕೇಶ್, ಗ್ರಾ.ಪಂ. ಸದಸ್ಯರಾದ ವಿನುಪ್ರಸಾದ್, ಸೆಲ್ವಿ ಮೆನಜಸ್, ವಿಮಲಾ, ಲಲಿತಾ, ರತ್ನಾ, ಮೇಘನಾ, ದಾವೀದ್, ಸುರೇಶ್, ಮುಸ್ತಾಫ್, ಸವಿತಾ, ಪನ್ನೀರ್ ಮತ್ತಿತರರಿದ್ದರು.
———-ಸುರೇಶ್