ಚಿಕ್ಕಮಗಳೂರು-ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲ್ಲೂಕು ಗೌರವಾಧ್ಯಕ್ಷರಾಗಿ ಬಸವಮಂದಿರದ ಶ್ರೀ ಮರುಳಸಿದ್ಧ ಸ್ವಾಮೀಜಿ ಹಾಗೂ ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರನ್ನು ಬುಧವಾರ ಬಸವತತ್ವ ಮಠದಲ್ಲಿ ಆಯ್ಕೆ ಮಾಡಲಾಯಿತು.
ಇದೇ ವೇಳೆ ಸದಸ್ಯತ್ವ ಅಭಿಯಾನಕ್ಕೆ ಸ್ವಾಮೀಜಿಗಳು ಚಾಲನೆ ನೀಡಿದರು. ಸಂಘಕ್ಕೆ ನೂತನ ಮಹಿಳಾ ನಿರ್ದೇಶಕರುಗಳಾಗಿ ಎಂ.ಬಿ.ಮೋಹನಕುಮಾರಿ, ನಳೀನಾ, ರುಕ್ಮೀಣಿ, ಪ್ರಮೀಳಾ, ಮೋಹನಕು ಮಾರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಸಂಘದ ಕೆ.ಸಿ.ನಿಶಾಂತ್, ಉಪಾಧ್ಯಕ್ಷ ನಾಗೇಶ್, ಹೇಮಾಲತ, ಕಾರ್ಯದರ್ಶಿ ಕೀರ್ತಿ, ಸಹ ಕಾರ್ಯದರ್ಶಿ ದರ್ಶನ್, ನಿರ್ದೇಶಕ ಶಿವಕೀರ್ತಿ ಮತ್ತಿತರರಿದ್ದರು.