ಚಿಕ್ಕಮಗಳೂರು-ನಾಳೆ ಈ ಸ್ಥಳಗಳಲ್ಲಿ ಸಂಜೆಯವರೆಗೂ ವಿದ್ಯುತ್ ನಿಲುಗಡೆ-ಮೆಸ್ಕಾಂ ಪ್ರಕಟಣೆ

ಚಿಕ್ಕಮಗಳೂರು:ಚಿಕ್ಕಮಗಳೂರು,ಹಿರೇಮಗಳೂರು, ದೇವಿಪುರ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ 3ನೇ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಸದರಿ ನಗರ ಮತ್ತು ಗ್ರಾಮೀಣ ಫೀಡರ್‌ಗಳ ವ್ಯಾಪ್ತಿಗೆ ಬರುವ ಪ್ರದೇಶಗಳಾದ ಹೌಸಿಂಗ್ ಬೋರ್ಡ್, ಮಾರ್ಕೇಟ್ ರಸ್ತೆ, ಐ.ಜಿ. ರಸ್ತೆ, ಆಜಾದ್ ಪಾರ್ಕ್, ವಿಜಯಪುರ, ಗೌರಿಕಾಲುವೆ, ಕೆಂಪನಹಳ್ಳಿ ಟೌನ್, ಸಿ.ಡಿ.ಎ ಲೇ ಜೌಟ್, ಬೈಪಾಸ್ ರಸ್ತೆ, ಬೇಲೂರು ರಸ್ತೆ, ಹಿರೇಮಗಳೂರು ಟೌನ್ ಮತ್ತು ಗ್ರಾಮೀಣ ಪ್ರದೇಶಗಳಾದ ಲಕ್ಷ್ಮೀಪುರ ಇಂಡಸ್ಟ್ರೀಯಲ್, ಲಕ್ಯಾ, ಉದ್ದೇಬೋರನಹಳ್ಳಿ, ದತ್ತ ಪೀಠ, ಮಲ್ಲೇನಹಳ್ಳಿ, ಹೊಸಪೇಟೆ, ಕಾಮೇನಹಳ್ಳಿ, ದಾಸರಹಳ್ಳಿ, ಬಿಂಡಿಗಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 22 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆ ವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ ಎಂದು ಮೆಸ್ಕಾಂ, ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?