ಚಿಕ್ಕಮಗಳೂರು-ಜಿಲ್ಲೆಯ ಜನತೆಗೆ ತುರ್ತು ಆರೋಗ್ಯ ಸೇವೆಗೆ ರಾಜ್ಯಸರ್ಕಾರ ಅಂಬುಲೆನ್ಸ್ ಹಾಗೂ ಶವಪೆಟ್ಟಿಗೆ ಮಂಜೂರು ಮಾಡಿರುವುದು ಸ್ವಾಗರ್ತಾಹ ಎಂದು ಜಿಲ್ಲಾ ವಕ್ಪ್ ಮಂಡಳಿ ಅಧ್ಯಕ್ಷ ಶಾಹೀದ್ ಮಹಮ್ಮದ್‌ರಜ್ವಿ ತಿಳಿಸಿದರು.
ರಾಜ್ಯದ ಪ್ರತಿ ಜಿಲ್ಲೆಗೆ ಅಂಬುಲೆನ್ಸ್ ಹಾಗೂ ಎಲ್ಲಾ ತಾಲ್ಲೂಕುಗಳಿಗೆ ಶವಪೆಟ್ಟಿಗೆ ಒದಗಿಸಲು ಸಹಕರಿಸಿದ ವಕ್ಪ್ ಸಚಿವ ಜಮೀರ್ ಅಹ್ಮದ್ ಹಾಗೂ ರಾಜ್ಯ ವಕ್ಪ್ ಮಂಡಳಿ ಅಧ್ಯಕ್ಷ ಕೆ.ಅನ್ವರ್ ಭಾಷಾ ಗೆ ಕೃತಜ್ಞತೆ ಸಲ್ಲಿಸಿದರು.
ಈ ಆಂಬ್ಯುಲೆನ್ಸ್ಗಳ ಬೆಲೆ ಸುಮಾರು 38 ಲಕ್ಷವಾಗಿದ್ದು, ಎಲ್ಲಾ ಆಧುನಿಕ ತಂತ್ರಜ್ಞಾನ ಮತ್ತು ಅಗತ್ಯ ಸೌಲಭ್ಯಗಳನ್ನು ಹೊಂದಿದೆ.ಈ ಆಂಬ್ಯುಲೆನ್ಸ್ಗಳು ಚಿಕ್ಕಮಗಳೂರು ಜಿಲ್ಲೆಯ ಸಾರ್ವಜನಿಕರ ಸೇವೆಗೆ ಲಾಭರಹಿತವಾಗಿ ಒದಗಿಸಲಾಗುತ್ತವೆ ಎಂದರು.
ಜಿಲ್ಲೆಯ ಜನತೆಗೆ ತುರ್ತು ಚಿಕಿತ್ಸೆ ಮತ್ತು ಅಗತ್ಯ ಸೇವೆಗಳನ್ನು ಹೆಚ್ಚು ತ್ವರಿತವಾಗಿ ಮತ್ತು ಸುಲಭವಾಗಿ ಬಳಸಲು ಅನುಕೂಲವಾಗಲಿದೆ ಎಂದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿoದ ಎಲ್ಲಾ ಸಮುದಾಯಕ್ಕೆ ಅನೇಕ ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.
ಈಗಾಗಲೇ ಅಂಬುಲೆನ್ಸ್ ಜಿಲ್ಲೆಯಲ್ಲಿ ತುರ್ತು ಸೇವೆ ಒದಗಿಸಲು ಆರಂಭಿಸಲಾಗಿದ್ದು ಸೇವೆ ಪಡೆಯಲಿಚ್ಚಿಸುವವರು ಜಾಮೀಯಾ ಮಸೀದಿ ಆಡಳಿತ ಮಂಡಳಿಯನ್ನು ಸಂರ್ಪಕಿಸಬಹುದು ಎಂದರು.