ಚಿಕ್ಕಮಗಳೂರು-ನಗರದ ಕುವೆಂಪು ಕಲಾಮಂದಿರದಲ್ಲಿ ನಿನ್ನೆ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಯಲ್ಲಿ ಶ್ರೀ ದುರ್ಗಾದೇವಿ ಜಾನಪದ ಕಲಾಸಂಘದ ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಯುವಜನೋತ್ಸವ ಸ್ಪರ್ಧೆಯಲ್ಲಿ ಅಮಿತ್‌ಆಚಾರ್ಯ, ಹರ್ಷಿತ್‌ಕುಮಾರ್, ಎಸ್.ಚೈತ್ರ, ರಮ್ಯಾ, ಜೋಯೆಲ್, ಕೀರ್ತಿ, ರಮ್ಯಾ, ಆಶಿಕಾ, ದರ್ಶನ್, ದೀಪಿಕಾ ಸ್ಫರ್ಧೆಯಲ್ಲಿದ್ದರು.
ಈ ಸಂದರ್ಭದಲ್ಲಿ ಕ.ಜಾ.ಪ ರಾಜ್ಯಾಧ್ಯಕ್ಷ ಡಾ.ಜಾನಪದ ಬಾಲಾಜಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಂಜುಳಾ ಹುಲ್ಲಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಮೇಶ್, ಕಲಾಸಂಘದ ಅಧ್ಯಕ್ಷ ಡಾ.ವಿಜಯ್‌ಕುಮಾರ್ ಜಾನಪದ ಮತ್ತಿತರರಿದ್ದರು.