ಚಿಕ್ಕಮಗಳೂರು-ನಗರದ ಕೊಡವ ಸಮಾಜದಲ್ಲಿ ಶುಕ್ರವಾರ ಕೊಡವ ಬಾಂದವರು ಕೊಡಗಿನ ತಲಕಾವೇರಿಯಿಂದ ತರಲಾದ ಪವಿತ್ರ ಕಾವೇರಿ ತೀರ್ಥಕ್ಕೆ ವಿಶೇಷ ಪೂಜೆ ಸಲ್ಲಿಸಿ ವಿರತಣೆ ನಡೆಸಿದರು.
ಗುರುವಾರ ಮುಂಜಾನೆ ಕೊಡಗು ಜಿಲ್ಲೆಯ ತಲಕಾವೇರಿಯ ಕಾವೇರಿ ನದಿಯ ಉಗಮ ಸ್ಥಾನದ ಕುಂಡಿಕೆಯಲ್ಲಿ ತೀರ್ಥೋದ್ಭವ ಆಗಿದ್ದು ಈ ತೀರ್ಥವನ್ನು ಕೊಡವ ಸಮಾಜಕ್ಕೆ ತರಲಾಗಿತ್ತು. ಶುಕ್ರವಾರ ಮುಂಜಾನೆ ಜಿಲ್ಲೆಯ ವಿವಿಧೆಡೆ ಇರುವ ಕೊಡವರು ಇಲ್ಲಿಗೆ ಆಗಮಿಸಿ ಪವಿತ್ರ ಕಾವೇರಿ ತೀರ್ಥಕ್ಕೆ ಪೂಜೆ ಸಲ್ಲಿಸಿದರು. ಮಹಿಳೆಯರು ಕೊಡಗಿನ ಸಂಪ್ರಾದಾಯಿಕ ಸೀರೆಯನ್ನುಟ್ಟು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾವೇರಿ ಮಾತೆಗೆ ಪ್ರಾರ್ಥನೆ ಮಾಡಿ ಪೂಜೆ ಸಲ್ಲಿಸಿದ ಬಳಿಕ ಕಾವೇರಿ ತೀರ್ಥವನ್ನು ವಿತರಿ ಸಲಾಯಿತು.
ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ಎಂ. ಅಪ್ಪಯ್ಯ, ಕೊಡವರಿಗೆ ಕಾವೇರಿ ಸಂಕ್ರಮಣ ಪವಿತ್ರವಾದ ಹಬ್ಬ ಮತ್ತು ಬಕ್ತಿ ಬಾವದ ಸಂಕೇತ. ಸಾಕಷ್ಟು ಕೊಡವರು ಜನರು ತೀರ್ಥ ಉದ್ಬವದ ದಿನ ತಲಕಾವೇರಿಗೆ ತಲುಪಿ ಈ ಪವಿತ್ರ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಾರೆ.ತೀರ್ಥ ರೂಪದಲ್ಲಿ ದರುಶನ ಕೊಡುವ ಕಾವೇರಿ ತಾಯಿಯ ದರ್ಶನ ಪಡೆದುಕೊಳ್ಳುತ್ತಾರೆ.
ಕಾವೇರಿ ನದಿಯಲ್ಲಿ ಮಿಂದು ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುತ್ತಾರೆ.ಕೊಡಗು ಜಿಲ್ಲೆ ಸೇರಿ ಹೊರ ಜಿಲ್ಲೆಯಲ್ಲಿರುವ ಕೊಡವರು ಕೂಡ ಆ ದಿನ ಸಾಮಾನ್ಯವಾಗಿ ಅಲ್ಲಿಗೆ ತೆರಳುತ್ತಾರೆ. ಆದರೆ ನಾನಾ ಕಾರಣಗಳಿಂದ ಕೆಲವರು ತಲಕಾವೇರಿಗೆ ಹೋಗಲು ಸಾಧ್ಯವಾಗಿರುವುದಿಲ್ಲ.ಅದಕ್ಕಾಗಿ ಅಲ್ಲಿಂದ ತೀರ್ಥವನ್ನು ತಂದು ಕೊಡವ ಸಮಾಜದಲ್ಲಿ ಪೂಜೆ ಸಲ್ಲಿಸಿ ಮನೆಮನೆಗೆ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.