ಕೆ.ಆರ್.ಪೇಟೆ– ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸಿಂಗನಹಳ್ಳಿ ಗ್ರಾಮದಲ್ಲಿ ವೃದ್ದ ಮಹಿಳೆಯೊಬ್ಬರಿಗೆ ಮೂವರ ಗುಂಪು ಹಲ್ಲೆಗೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಸಿಂಗನಹಳ್ಳಿ ಗ್ರಾಮದ ಕುಮಾರೇಗೌಡ ಬಿನ್ ಕುಂಟೇಗೌಡ, ಶಾಂತಮ್ಮ ಕೋಂ ಕುಮಾರೇಗೌಡ, ಮಣಿ ಬಿನ್ ರಾಜೇಗೌಡ ಎಂಬವವರೇ ವೃದ್ದೆಗೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಆರೋಪಿಗಳಾಗಿದ್ದ, ಇದೇ ಗ್ರಾಮದ ಲಕ್ಷ್ಮಮ್ಮ ಕೋಂ ಲೇಟ್ ಕಾಳೇಗೌಡ ಮತ್ತು ಮೊಮ್ಮಗ ಸುಹಾಸ್.ಸಿಂಕಾ.ಸುರೇಶ್ ಎಂಬುವವರಿಗೆ ಕೊಲೆ ಬೆದರಿಕೆ ಹಾಕಿದ್ದು ರಕ್ಷಣೆ ಕೋರಿ ವೃದ್ದೆ ಲಕ್ಷ್ಮ ಪೊಲೀಸರಿಗೆ ನೀಡಿದ್ದಾರೆ.



ಘಟನೆ ವಿವಿರ: ಸಿಂಗನಹಳ್ಳಿ ಗ್ರಾಮದ ತಮ್ಮ ಮನೆಯ ಬಳಿ ಇರುವ ನಿವೇಶನ ಒತ್ತುವರಿ ಸಂಬಂಧಪಟ್ಟಂತೆ ಹಳೆಯ ದ್ವೇಷ ಇಟ್ಟುಕೊಂಡು ನನ್ನ ಮನೆಗೆ ಕುಮರೇಗೌಡ, ಶಾಂತಮ್ಮ, ಮಣಿ ಎಂಬುವವರು ವೃದ್ದೆ ಲಕ್ಷ್ಮಮ್ಮ ಅವರ ಮನೆಗೆ ನುಗ್ಗಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆಗೆ ಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ವೃದ್ದೆಯ ಮೊಮ್ಮಗ ಸುಹಾಸ್ ಎಂಬುವವರು ವೃದ್ದೆಯ ಮೇಲೆ ಏಕೆ ಜಗಳ ಮಾಡುತ್ತಿದ್ದಿರಿ ಎಂದು ಪ್ರಶ್ನೆ ಮಾಡಿದಾಗ ಆತನ ಮೇಲೂ ಹಲ್ಲೆಗೆ ಯತ್ನಿಸಿ, ಒಂಟಿಯಾಗಿ ಸಿಕ್ಕಿದಾಗ ಕೊಲೆ ಮಾಡುವ ಬೆದರಿಕೆಯನ್ನು ಹಾಕಿರುತ್ತಾರೆ. ಅಲ್ಲದೆ ವೃದ್ದೆಯ ಸಬಂಧಿಕರಿಗೆ ಪೋನ್ ಕರೆ ಮಾಡಿರುವ ಆರೋಪಿಗಳು ಮೊಮ್ಮಗ ಸುಹಾಸ್ ಮತ್ತು ವೃದ್ದೆಯನ್ನು ಕೊಲೆ ಮಾಡುವ ಬೆದರಿಸುತ್ತಿದ್ದಾರೆ. ಹಾಗಾಗಿ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿರುವ ಆರೋಪಿಗಳಾದ ಕುಮಾರೇಗೌಡ, ಶಾಂತಮ್ಮ ಹಾಗೂ ಮಣಿ ಎಂಬುವವರ ವಿರುದ್ದ ಕಾನೂನು ಕ್ರಮ ಕೈಗೊಂಡು ಸೂಕ್ತ ರಕ್ಷಣೆ ನೀಡಬೇಕು ಎಂದು ವೃದ್ದೆ ಲಕ್ಷ್ಮಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸುವ ಸಬ್ ಇನ್ಸ್ಪೆಕ್ಟರ್ ಸುಬ್ಬಯ್ಯ ಅವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
- ಶ್ರೀನಿವಾಸ್ ಆರ್, ಕೆ.ಆರ್.ಪೇಟೆ