ಚಿಕ್ಕಮಗಳೂರು:– ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ 2024-25 ರ ದತ್ತಿ ಪ್ರಶಸ್ತಿ ಈ ಬಾರಿ ಜಿಲ್ಲೆಯ ಐಡಿಎಸ್‌ಜಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಪುಷ್ಪಭಾರತಿ ಅವರ ‘ಹುಡುಕಾಟದ ಮಿಡುಕು’ ಕೃತಿಗೆ ಪುರಸ್ಕೃತಗೊಂಡ ಹಿನ್ನೆಲೆಯಲ್ಲಿ ಗುರುವಾರ ತಾಲ್ಲೂಕು ಕಸಾಪ ಪದಾಧಿಕಾರಿಗಳು ಪ್ರೊ.ಪುಷ್ಪಭಾರತಿ ಅವರನ್ನು ಗೌರವಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ದಯಾನಂದ್ ಮಾವಿನಿಕೆರೆ, ನಿಕಟಪೂರ್ವ ಅಧ್ಯಕ್ಷ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಬಸವರಾಜ್, ಸಂದೀಪ್, ನಗರಾಧ್ಯಕ್ಷ ಸಚಿನ್‌ಸಿಂಗ್, ಅಂಬಳೆ ಹೋಬಳೀ ಅಧ್ಯಕ್ಷ ಮಾಸ್ತೇಗೌಡ, ಕಸಾಬ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್, ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಚೈತ್ರಗೌಡ, ಮುಖಂಡರಾದ ಆಶಾರಾಜು, ಜಯಂತಿ ಮತ್ತಿತರರಿದ್ದರು.
- ಕೆ.ಬಿ.ಚಂದ್ರಚೂಡ