ಚಿಕ್ಕಮಗಳೂರು-ನಾಯ್ಡು ಬೀದಿ-ಅಂಗಡಿ-ಮಾಲೀಕರಿಂದ-ಅಭಿನಂದನೆ- ಸಲ್ಲಿಕೆ

ಚಿಕ್ಕಮಗಳೂರು: ನಗರದ ನಾಯ್ಡು ಬೀದಿ ರಸ್ತೆಯನ್ನು ತಾತ್ಕಾಲಿಕವಾಗಿ ಡಾಂಬರೀಕರಣಗೊಳಿಸಲು ಸಹಕರಿಸಿದ ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್ ನಾಯ್ಡು ಬೀದಿ ಅಂಗಡಿ ಮುಂಗಟ್ಟುದಾರರು ಗೌರವಿಸಿ ಅಭಿನಂದನೆ ಸಲ್ಲಿಸಿದರು.


ಅಭಿನಂದನೆ ಸ್ವೀಕರಿಸಿ ಮಾತನಾಡಿದ ಉಪ್ಪಳ್ಳಿ ಕೆ.ಭರತ್ನ, ಗರದ ಹೃದಯಭಾಗ ರಸ್ತೆಯಾದ ನಾಯ್ಡು ಬೀದಿ ರಸ್ತೆಯಲ್ಲಿ ಕಳೆದ ೧೦ ತಿಂಗಳ ಹಿಂದೆ ಬಗೆದು ಧೂಳುಮಯವಾಗಿತ್ತು. ಈ ಬಗ್ಗೆ ಅನೇಕ ದೂರುಗಳು ನೀಡಿದರೂ ಗಮನಹರಿಸದ ನಗರಸಭೆ, ಎಲ್ಲರ ಒಗ್ಗಟ್ಟಾಗಿ ಹೋರಾಟ ಮಾಡಿದ ಬಳಿಕ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ ಸಂಚರಿಸಲು ಅನುಕೂಲ ಮಾಡಿಕೊಟ್ಟಿದೆ ಎಂದರು.


ಹೋಟಲ್ ಉದ್ಯಮಿ ಬಿ.ಸಿ.ರಾವ್ ಭರತ್ ರವರು ಕಳೆದ ೨೫ ವರ್ಷಗಳಿಂದಲೂ ಜಿಲ್ಲೆಯಲ್ಲಿ ಜನ ಪರವಾದ ನಾನಾ ರೀತಿಯಾದ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ. ಸಾಮಾಜಿಕ ಕಳಕಳಿ ಹಾಗೂ ಜನಪರ ಹೋರಾಟಗಳನ್ನು ಮನಗಂಡು ಇವರಿಗೆ ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನೀಡಬೇಕು ಹಾಗೂ ಮುಂದಿನ ದಿನಗಳಲ್ಲಿ ಮಹಾನ್ ಜನನಾಯಕನಾಗಿ ಹೊರ ಹೊಮ್ಮುವ ಎಲ್ಲ ಲಕ್ಷಣಗಳು ಕಾಣುತ್ತಿದ್ದು, ಅವರಿಗೆ ಮುಂಬರುವ ದಿನಗಳಲ್ಲಿ ಕ್ಷೇತ್ರದ ಜನರು ಶಕ್ತಿ ತುಂಬುವಂತ ಕೆಲಸ ಮಾಡಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ನಾಯ್ಡು ಬೀದಿ ಅಂಗಡಿ ಮಾಲೀಕರಾದ ಸುರೇಶ್, ಕರುಣಾಕರ್‌ಶೆಟ್ಟಿ, ಹೇಮಂ ತ್, ಮೆಡಿಕಲ್ ಸತೀಶ್, ಮಲ್ಲಿಕಾರ್ಜುನ್, ಮಂಜುನಾಥ್, ರಾಜು, ಕುಮಾರ್ ಮತ್ತಿತರರಿದ್ದರು.

-ಸುರೇಶ್‌ ಎನ್‌.

Leave a Reply

Your email address will not be published. Required fields are marked *

× How can I help you?