ತುಮಕೂರು: ಜಿಲ್ಲಾ ವಕೀಲರ ಚುನಾವಣೆಯಲ್ಲಿ,ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿ, ಭಾರಿ ಬಹುಮತದಿಂದ ಭರ್ಜರಿ ಜಯಗಳಿಸಿದ ಹಿರೇಹಳ್ಳಿಮಹೇಶ್ ರವರು ಇಂದು,ತುಮಕೂರು ಗ್ರಾಮಾಂತರ ನಿಕಟ ಪೂರ್ವ ಶಾಸಕರಾದ ಡಿ.ಸಿ ಗೌರಿಶಂಕರ್ ರವರನ್ನು ಭೇಟಿಯಾಗಿ,ಹೂ ಗುಚ್ಛ ನೀಡಿ ಅಭಿನಂದನೆಗಳನ್ನು ತಿಳಿಸಿದರು.
ಮಹೇಶ್ ರವರನ್ನು ಡಿ.ಸಿ.ಗೌರಿಶಂಕರ್ ರವರು ಹೂಮಾಲೆ ಹಾಕಿ ಅಭಿನಂದಿಸಿ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ವಕೀಲರುಗಳಾದ ಹಾಲನೂರು ಅನಂತ್,ಎಂ.ಸಿ.ಚಂದ್ರಯ್ಯ,ಸುಬ್ಬು,ಚನ್ನಶಿವಮಣಿ,ಕುಮಾರ್,ಸುನಿಲ್ ಪಟೇಲ್ ಇತರರು ಉಪಸ್ಥಿತರಿದ್ದರು.
– ಕೆ.ಬಿ ಚಂದ್ರಚೂಡ