ಎಚ್.ಡಿ.ಕೋಟೆ-ತಾಲೂಕಿ‌ನ-ಜೀತಮುಕ್ತರ-ಪರ-ಅಧಿವೇಶನದಲ್ಲಿ- ಧ್ವನಿಯಾದ-ಶಾಸಕ-ಅನಿಲ್-ಚಿಕ್ಕಮಾದು-ಜೀವಿಕ-ಸಂಘಟನೆಯಿಂದ‌- ಅಭಿನಂದನೆ

ಎಚ್.ಡಿ.ಕೋಟೆ: ರಾಜ್ಯ ವಿಧಾನ‌ ಮಂಡಲ‌ ಅಧಿವೇಶನದ‌ ಬುಧವಾರದಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತಾನಾಡಿದ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ತಾಲೂಕಿನ ಹಲವಾರು ಸಮಸ್ಯೆಗಳನ್ನು ಚರ್ಚಿಸಿ ಬಹುಮುಖ್ಯವಾಗಿ ಎಚ್. ಡಿ. ಕೋಟೆ ತಾಲೂಕಿನಲ್ಲಿ ಜೀತದಿಂದ ವಿಮುಕ್ತರಾಗಿ ಸಮಾಜದ ಮುಖ್ಯವಾಹಿನಿಗೆ ಬಂದು ಜೀವನ ನಡೆಸಲು ಹೆಣಗಾಡುತ್ತಿರುವ ಜೀತಮುಕ್ತರ ಜೀವನ ಸ್ಥಿತಿಯನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನವನ್ನು ಸೆಳೆದಿದ್ದಾರೆ.

ಜೀತಮುಕ್ತರ ಬಗ್ಗೆ ಪ್ರಸ್ತಾಪಿಸಿದ ಶಾಸಕ ಜೀತ ಪದ್ಧತಿ ನಿರ್ಮೂಲನೆ ಆಗಿದ್ದರೂ ಈ ಪದ್ದತಿಯಿಂದ ಹೊರಬಂದಿರುವ ಜೀತವಿಮುಕ್ತರಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳಾದ ಭೂಮಿ, ಪಂಪಸೆಟ್, ವಾಸಕ್ಕೆಮನೆ, ನಿವೇಶನ, ಮತ್ತಿತರರ ಸವಲತ್ತು ಸಿಗದೆ ಅತಂತ್ರ ಸ್ಥಿತಿಯಲ್ಲಿದ್ದು, ಅವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾನ್ಯ ಶಾಸಕರು ಜೀತಮುಕ್ತರ ಪರವಾಗಿ ಸದನದಲ್ಲಿ ಚರ್ಚಿಸಿ ಅವರಲ್ಲಿ ಆಶಾಭಾವನೆ ಮೂಡಿಸಿರುವುದು ಅತ್ಯಂತ ಸಂತೋಷ ವಿಷಯವಾಗಿದೆ ಎಂದು ಜೀವಿಕ ರಾಜ್ಯ ಸಂಘಟನಾ ಸಂಚಾಲಕ ಉಮೇಶ್. ಬಿ. ನೂರಲಕುಪ್ಪೆ ಶಾಸಕ ಅನಿಲ್ ಚಿಕ್ಕಮಾದು ರವರನ್ನ ಅಭಿನಂದಿಸಿದ್ದಾರೆ.

ಕಳೆದ ಫೆ.18 ರಂದ ಜೀವಿಕ ಸಂಘಟನೆ ಮತ್ತು ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ವತಿಯಿಂದ ತಾಲೂಕಿ‌ ಸಾವಿರಕ್ಕೂ ಹೆಚ್ಚು ಸೇರಿ ಪ್ರತಿಭಟನೆ ಮೆರವಣಿಗೆ ನಡೆಸಿ ಜೀತಮುಕ್ತರಿಗೆ ಬಜೆಟ್ ನಲ್ಲಿ ವಿಶೇಷ ಪ್ಯಾಕೇಜ್ ನೀಡಿ ಎಂದು ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಅನಾರೋಗ್ಯದ ನಡುವೆಯೂ ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕರು ಮನವಿ ಸ್ವೀಕರಿಸಿ ನಿಮ್ಮ ಪರವಾಗಿ ಸದನದಲ್ಲಿ ಚರ್ಚೆಮಾಡುತ್ತೆನೆ ಎಂದು ಭರವಸೆ ನೀಡಿದನ್ನು‌ ಜೀವಿಕ‌‌ ಸಂಘಟನೆ‌ ಸ್ಮರಿಸಿದೆ.

ಕೊಟ್ಟ ಮಾತಿನಂತೆ ಸದನದಲ್ಲಿ ಜೀತಮುಕ್ತರ ಪರವಾಗಿ ಸರ್ಕಾರದ ಗಮನ ಸೆಳೆದ ಶಾಸಕರ ನಡೆಯನ್ನ ಜೀವಿಕ ಸಂಘಟನೆ ಮತ್ತು ಕರ್ನಾಟಕ ಜೀತದಾಳು ಕೃಷಿ ಕಾರ್ಮಿಕರ ಒಕ್ಕೂಟವು ಅಭಿನಂದನೆ ಸಲ್ಲಿಸಿದೆ.

ಜೀವಿಕ ರಾಜ್ಯ ಸಂಘಟನಾ ಸಂಚಾಲಕ ಉಮೇಶ್. ಬಿ. ನೂರಲಕುಪ್ಪೆ. ಜಿಲ್ಲಾ ಸಂಚಾಲಕ ಬಸವರಾಜ್, ತಾ. ಸಂಚಾಲಕ ಚಂದ್ರಶೇಖರ ಮೂರ್ತಿ, ಶಿವರಾಜ್, ವೆಂಕಟೇಶ, ನಟರಾಜ್, ಶ್ರೀನಿವಾಸ್, ನಾಗರಾಜ್, ಮುಖಂಡರಾದ ಮಹದೇವ, ಶಿವಣ್ಣ, ಮಂಜುನಾಥ್, ಗೋಪಾಲ್, ನಂದೀಶ್, ಸೋಮಣ್ಣ, ಗಣೇಶ್, ನಾಗಮ್ಮ, ವಸಂತ, ಮಲ್ಲಿಗಮ್ಮ, ಮಲ್ಲಿಗಮ್ಮಸೋಮಣ್ಣ, ಲಕ್ಷ್ಮಮ್ಮ, ಜಯಮ್ಮ, ತೊಳಸಮ್ಮ ಮತ್ತಿತರರು ಅಭಿನಂದನೆ ತಿಳಿಸಿದ್ದಾರೆ.

  • ಶಿವು ಕೋಟೆ

Leave a Reply

Your email address will not be published. Required fields are marked *

× How can I help you?