ಚಿಕ್ಕಮಗಳೂರು : ಚಿಕ್ಕಮಗಳೂರು ನಗರಸಭೆಯ ತೆರಿಗೆ ಪಾವತಿದಾರರಿಗೆ ಶೇಕಡ ಐದು ರಿಯಾಯಿತಿಯನ್ನು ನೀಡಲಾಗಿದ್ದು ಪ್ರಥಮ ಪಾವತಿದಾರರಿಗೆ ಗುಲಾಬಿ ಹೂ ನೀಡುವ ಮೂಲಕ ನಗರಸಭಾ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದರು.
2025-26 ನೇ ಸಾಲಿನ ಆಸ್ತಿ ತೆರಿಗೆಯನ್ನು 2025ನೇ ಏಪ್ರಿಲ್ ತಿಂಗಳ 30ನೆ ತಾರೀಖಿನೊಳಗೆ ಪಾವತಿಸಿದಲ್ಲಿ ಶೇಕಡ 5% ರಿಯಾಯಿತಿ ನೀಡಲಾಗುತ್ತಿದ್ದು. ನಂತರದ ಪಾವತಿಗೆ ಯಾವುದೇ ರಿಯಾಯಿತಿ ಇರುವುದಿಲ್ಲ ಎಂದು ಪೌರಾಯುಕ್ತ ಬಿಸಿ ಬಸವರಾಜ್ ಅವರು ಸ್ಪಷ್ಟನೆ ನೀಡಿದರು.
ಮೇ ತಿಂಗಳಲ್ಲೇ ಯಾವುದೇ ರಿಯಾಯಿತಿ ಮತ್ತು ದಂಡ ವಿರುವುದಿಲ್ಲ ಆದರೆ ಜೂನ್ ತಿಂಗಳ ನಂತರದ ಆಸ್ತಿ ತೆರಿಗೆ ಪಾವತಿಗೆ ಪ್ರತಿ ತಿಂಗಳು ಶೇಕಡಾ ಎರಡರಷ್ಟು ದಂಡವನ್ನು ವಿಧಿಸಲಾಗುವುದು ಎಂದು ತಿಳಿಸಿದರು.
ಈ ರಿಯಾಯಿತಿ ಆಂದೋಲನವನ್ನು ಪ್ರೋತ್ಸಾಹಿಸುವ ಸಲುವಾಗಿ ತೆರಿಗೆ ಪಾವತಿ ದಾರರಿಗೆ ಗುಲಾಬಿ ಹೂವನ್ನು ನೀಡಿ ಅಭಿನಂದಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ತೆರಿಗೆ ಪಾವತಿಗೆ ಎಲ್ಲಾ ರೀತಿಯ ಆನ್ಲೆöÊನ್ ಪಾವತಿಯ ಸೌಲಭ್ಯವನ್ನು ಒದಗಿಸಲಾಗಿದೆ ಅಲ್ಲದೆ ಆಸ್ತಿ ತೆರಿಗೆಯನ್ನು ಮತ್ತು ನಗರಸಭೆಯ ಇತರ ಶುಲ್ಕಗಳನ್ನು ನಗರಸಭೆ ಆವರಣದಲ್ಲಿರುವ ಬ್ಯಾಂಕಿನಲ್ಲಿಯೇ ಅಥವಾ ಯಾವುದೇ ಅನ್ಯ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಾವತಿಸಬಹುದಾಗಿದೆ ಎಂದು ತಿಳಿಸಿದ ಅವರು, ಸಾರ್ವಜನಿಕರು ಈ ವ್ಯವಸ್ಥೆಯ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದು ಈ ಮೂಲಕ ಕೋರಿದ್ದಾರೆ.

ಈ ಸಂದರ್ಭದಲ್ಲಿ ವ್ಯವಸ್ಥಾಪಕರು ರವಿ ಎಸ್ ಆರ್, ದೀಪಕ್ ಎಂ ಕಂದಾಯ ಅಧಿಕಾರಿ, ಚಂದ್ರಶೇಖರ್ ಸಿ ಜಿ ಪ್ರಥಮ ದರ್ಜೆ ಸಹಾಯಕರು ಇದ್ದರು.