ಚಿಕ್ಕಮಗಳೂರು: ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ನಿರ್ದೇಶಕರಾಗಿ ಆಯ್ಕೆಗೊಂಡ ಜಗದೀಶ್ ಪ್ರಭ, ಪರಮೇಶ್ವರ್ ಹಾಗೂ ಹೆಚ್.ವಿ.ಅಶೋಕ್ ಅವರಿಗೆ ನಗರ ಗೃಹ ನಿರ್ಮಾಣ ಸಹಕಾರ ಸಂಘದಿಂದ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಈ ವೇಳೆ ಗೃ.ನಿ.ಸ.ಸಂಘದ ಅಧ್ಯಕ್ಷ ಹೆಚ್.ಎಂ.ನಾರಾಯಣ್ ಮಾತನಾಡಿ, ಜನಪರ ಕೆಲಸ, ರೈತಸ್ನೇಹಿ ಕಾರ್ಯಕ್ರಮಗಳಿಗೆ ಸ್ಪಂದಿಸಿರುವ ಕಾರಣ ಹಿರೇಮಗಳೂರು ಸಂಘದ ಮತದಾರರು ಗುರುತಿಸಿ ಆಯ್ಕೆ ಮಾಡಿರುವುದಕ್ಕೆ ಈ ನಿರ್ದೇಶಕರುಗಳೇ ನೇರ ಸಾಕ್ಷಿ ಎಂದು ಅವರು,
ಜವಾಬ್ದಾರಿಯುತ ಆಡಳಿತಕ್ಕೆ ನೇಮಕಗೊಂಡಿರುವ ನಿರ್ದೇಶಕರು ರೈತಾಪಿ ವರ್ಗಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕು. ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಸಾಲಸೌಲಭ್ಯ ಕಲ್ಪಿಸಿ ಆರ್ಥಿಕವಾಗಿ ರೈತರು ಹಾಗೂ ಸಂಘವನ್ನು ಲಾಭಾಂಶದತ್ತ ಕೊಂಡೊಯ್ಯಬೇಕು ಎಂದು ಸಲಹೆ ಮಾಡಿದರು.

ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ ಮಾತನಾಡಿ ಹಿರೇಮಗಳೂರು ಸಹಕಾರ ಸಂ ಘವು ಸಂಪೂರ್ಣ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದ್ದು ಹಿಂದಿನ ಅವಧಿಗಿಂತ ಭಿನ್ನವಾಗಿ ಸಂಘದ ಬೆಳವಣಿಗೆಗೆ ನಿರ್ದೇಶಕರು ದುಡಿದರೆ ಪಕ್ಷದ ಮೇಲೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತದೆ ಎಂದ ಅವರು, ಅಲ್ಲದೇ ನಿರ್ದೇಶಕರುಗಳ ಸಹಕಾರದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ತಾಲ್ಲೂಕಿನ ವಿವಿದೆಡೆ ಹಮ್ಮಿಕೊಳ್ಳಲು ಅವಶ್ಯವಿದೆ. ರಾಜ್ಯಸರ್ಕಾರ ಯೋಜನೆಗಳನ್ನು ಗ್ರಾಮೀಣ ಮಟ್ಟದಲ್ಲಿ ತಲುಪದಿರುವ ಕು ಟುಂಬಗಳಿಗೆ ನಿರ್ದೇಶಕರುಗಳು ಸಹಕಾರ ನೀಡಿದರೆ ಪ್ರಾಮಾಣಿಕವಾಗಿ ತಲುಪಿಸುವ ಕಾರ್ಯಕ್ಕೆ ಮುಂದಾ ಗುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರುಗಳಾದ ಬಿ.ಎಂ. ಕುಮಾರ್, ಎಲ್.ವಿ.ಕೃಷ್ಣಮೂರ್ತಿ, ಮುಖಂಡರುಗಳಾದ ಎಂ.ಆರ್.ಶಫೀ, ಕನ್ನಡಸೇನೆ ಗುರು, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.