ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಗ್ರಾಮದಲ್ಲಿ ಎಳೆ ಕಂಡವರನ್ನು ಅಚ್ಚರಿ ಗೊಳಿಸುವ ಘಟನೆ ನಡೆದಿದೆ. ಗ್ರಾಮಸ್ಥ ವಿಕ್ರಂ ಅವರ ಅಂಗಡಿಯ ಮುಂದೆ ಪ್ರತಿದಿನ ಸುಮಾರು 10 ರಿಂದ 20 ಲೀಟರ್ ಹಾಲು ಇಲ್ಲವಾಗುತ್ತಿದ್ದು, ಇದು ಮಾನವನ ಕೃತ್ಯವಿರಬಹುದೆಂದು ಅವರು ಶಂಕಿಸಿದ್ದರು. ಆದರೆ, ಸತ್ಯ ಬಯಲಾಗಿದ್ದು ಎಲ್ಲರನ್ನೂ ಆಶ್ಚರ್ಯಚಕಿತರಾಗಿಸುತ್ತಿದೆ.
ಅಂಗಡಿಯ ಮುಂದೆ ಹಾಲು ವಿತರಕರಿಂದ ಇಡಲ್ಪಟ್ಟ ಟ್ರೇಯಲ್ಲಿ ಇರುವಾಗಲೇ, ಒಂದು ಹಸು ನಿರಂತರವಾಗಿ ಬಂದು ಪ್ಯಾಕೆಟ್ ಹಾಲು ಕುಡಿದು ಹೋಗುತ್ತಿದ್ದುದು ಸಿಸಿಟಿವಿ ದೃಶ್ಯಗಳಲ್ಲಿ ದೃಢಪಟ್ಟಿದೆ. ಇದಷ್ಟೇ ಅಲ್ಲದೆ, ಪ್ಲಾಸ್ಟಿಕ್ ಹಾಲಿನ ಕವರ್ಗಳೂ ಕಾಣೆಯಾಗುತ್ತಿದ್ದ ಕಾರಣ ಈ ಹಸು ಅವುಗಳನ್ನೂ ತಿಂದು ಹಾಕುತ್ತಿದ್ದೇ ಎಂಬ ಸಂಗತಿಯೂ ದೃಢವಾಗಿದೆ.

ಈ ಘಟನೆ ಸ್ಥಳೀಯರಲ್ಲಿ ಆಶ್ಚರ್ಯ, ನಗು ಹಾಗೂ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ‘ಹಾಲು ಕದಿಯುವ ಹಸು’ ಈಗ ಸದ್ಯದ ಸೆಲೆಬ್ರಿಟಿ ಎನಿಸಿದೆ.