ಚಾರ್ಮಾಡಿ: ರಸ್ತೆ ದಾಟುತ್ತಿದ್ದಾಗ ಕೋತಿಗೆ ಕಾರು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಕೋತಿ ಸಾವಿಗೀಡಾಗಿದ ಘಟನೆ ಚಾರ್ಮಾಡಿಯ ಘಾಟಿಯಲ್ಲಿ ನಡೆದಿದೆ. ಅಪಘಾತ ಮಾಡಿದ ಕಾರು ನಿಲ್ಲಿಸದೆ ಹೋಗಿದ್ದರಿಂದ ಕೋತಿ ನರಳುತ್ತ ರಸ್ತೆ ಮದ್ಯದಲ್ಲೇ ಪ್ರಾಣಬಿಟ್ಟಿದೆ .

ಅಲೇಖಾನ್ ನಲ್ಲಿ ವಾರ್ಷಿಕ ಪೂಜೆ ಮುಗಿಸಿಕೊಂಡು ಅದೇ ಮಾರ್ಗದಲ್ಲಿ ಬರುತ್ತಿದ್ದ ಮತ್ತಿಕಟ್ಟೆಯ ಹರೀಶ್ ಹಾಗೂ ಜಾವಳೆ ಗ್ರಾಮದ ಯುವಕರು ವಾಹನವನ್ನು ನಿಲ್ಲಿಸಿ ಕೂಡಲೇ ಕೋತಿಯ ಮೃತದೇಹವನ್ನ ರಸ್ತೆಯಿಂದ ಎತ್ತಿಕೊಂಡು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಲ್ಲೇ ಸಮೀಪದಲ್ಲೇ ಮಣ್ಣು ಮಾಡುವ ಮೂಲಕ ಅಂತ್ಯ ಸಂಸ್ಕಾರ ನಡೆಸಿದರು. ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
– ಸೂರಿ ಬಣಕಲ್