ಚಿಕ್ಕಮಗಳೂರು:– ಜಿಲ್ಲೆಯಲ್ಲಿ ನೂತನವಾಗಿ ದಲಿತ ಸಂಘಟನೆ ಸಂಘ ಅಂಬೇಡ್ಕರ್ ಧ್ವನಿ ಅಸ್ಥಿತ್ವಗೊಂಡಿದ್ದು, ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸುಂದ್ರೇಶ್ ಹೊಯ್ಸಳಲು ಮತ್ತು ಉಸ್ತುವಾರಿ ಅಧ್ಯಕ್ಷ ರಾಗಿ ವಸಂತ್.ಟಿ.ಡಿ.ಪುರ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆ ರಾಜ್ಯಾಧ್ಯಕ್ಷೆ ವಸಂತ ಕುಮಾರ್ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಏರ್ಪಡಿಸಿದ್ಧ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಪದ ಗ್ರಹಣ ಕಾರ್ಯಕ್ರಮದಲ್ಲಿ ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ನೇಮಿಸಿದರು.
ಜಿಲ್ಲಾ ಘಟಕದಲ್ಲಿ ಅಶ್ವಥ್, ರವಿ (ಉಪಾಧ್ಯಕ್ಷರು), ರಘುವೀರ್ ಬೊಂಮ್ಲಪುರ (ಪ್ರ.ಕಾರ್ಯದರ್ಶಿ), ವಿಕಾಸ್ (ಕಾರ್ಯದರ್ಶಿ), ರಾಜು ಹರಿಹರಪುರ (ಕಾರ್ಯಾಧ್ಯಕ್ಷ), ಪ್ರಸನ್ನಗುಂಡಪ್ಪ (ಪ್ರಚಾರ ಸಮಿತಿ ಅಧ್ಯಕ್ಷ), ಡಿ.ಜಿ.ಶಂಕರ್ (ಯುವಘಟಕ ಅಧ್ಯಕ್ಷ), ಹೇಮಾವತಿ (ಮಹಿಳಾ ಘಟಕ ಜಿಲ್ಲಾಧ್ಯಕ್ಷೆ)
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ್ ಶಂಕರ್ ಹಾಗೂ ವಿವಿಧ ತಾಲ್ಲೂಕು, ಹೋಬಳಿ ಮುಖಂಡರುಗಳು ಉಪಸ್ಥಿತರಿದ್ದರು.
– ಸುರೇಶ್ ಎನ್.