ಚಿಕ್ಕಮಗಳೂರು: ಅವೈಜ್ಞಾನಿಕವಾಗಿ ನೆಲಬಾಡಿಗೆ ನಿಗಧಿಪಡಿಸಿ ವಸೂಲಿ ಮಾಡುತ್ತಿರು ವ ಕ್ರಮವನ್ನು ರದ್ದುಪಡಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಬುಧವಾರ ಜಿಲ್ಲಾ ಪಂಚಾಯಿತಿ ಸಿಇಓ ಹೆಚ್.ಎಸ್.ಕೀರ್ತನಾ ಅವರಿಗೆ ಮನವಿ ಸಲ್ಲಿಸಿದರು.
ದಸಂಸ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಮಾತನಾಡಿ, ನ.ರಾ.ಪುರ ತಾಲ್ಲೂಕಿನ ಮುಖ್ಯ ರಸ್ತೆಯಲ್ಲಿ ಬಿ.ಕಣಬೂರು ಗ್ರಾಮ ಪಂಚಾಯಿತಿ ಪ್ರತಿ ತಿಂಗಳು 35೦೦ ನೆಲೆ ಬಾಡಿಗೆ ನಿಗಧಿಪಡಿಸಿ ವಸೂಲಿ ಮಾಡುತ್ತಿರುವುದು ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಹೇಳಿದರು.
ವಿಪರೀತ ಬಾಡಿಗೆ ಹೆಚ್ಚಳ, ವ್ಯಾಪಾರವು ತೀರಾ ಕಡಿಮಯಿರುವ ಹಿನ್ನೆಲೆಯಲ್ಲಿ ವ್ಯಾಪಾರಸ್ಥರಿಗೆ ಅಧಿಕ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಪ.ಜಾತಿ ಮಹಿಳೆಯೊಬ್ಬರು ಪುಟ್ಟಿ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿದ್ದು ಅವರಿಗೂ ಪ್ರತಿ ತಿಂಗಳು ಎರಡು ಸಾವಿರ ಬಾಡಿಗೆ ಕಷ್ಟಕರವಾಗಿದೆ ಎಂದು ಹೇಳಿದರು.

ಹೀಗಾಗಿ ಜಿ.ಪಂ. ಸಿಇಓ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಗೆ ನಿಗಧಿಪಡಿಸಿರುವ ಒಂದು ಸಾವಿರ ನೆಲೆ ಬಾಡಿಗೆಯನ್ನು ನಿಗಧಿಗೊಳಿಸಲು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.
- ಸುರೇಶ್ ಎನ್.